ಮುಜರಾಯಿ ಇಲಾಖೆಯಿಂದದೇವಾಲಯಗಳನ್ನಮುಕ್ತಗೊಳಿಸಿ:ಸುಬುಧೇಂದ್ರ ಶ್ರೀ
05:03 PM Sep 23, 2024 IST
|
ಅಮೃತ ಮೈಸೂರು
Advertisement
ರಾಯಚೂರು: ಮಠಮಾನ್ಯಗಳು, ದೇವಾಲಯಗಳು, ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನ ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಬೇಕು ಎಂದು ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಆಗ್ರಹಿಸಿದ್ದಾರೆ.
Advertisement
ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಶ್ರೀಗಳು, ಸ್ವಾತಂತ್ರ್ಯ ಪೂರ್ವದಲ್ಲಿ ದೇವಸ್ಥಾನ, ಮಠಗಳು ಆಯಾ ಶಿಷ್ಯರು, ಭಕ್ತರು ಸಮುದಾಯ ಮುಖಂಡರ ನೇತೃತ್ವದಲ್ಲಿ ನಿರ್ವಹಣೆಯಾಗುತ್ತಿತ್ತು.
ಈಗ ಲೌಕಿಕ ಕಾನೂನುಗಳಿಂದ ಇದೆಲ್ಲಾ ಸರ್ಕಾರದ ವಶಕ್ಕೆ ಹೋಗಿದೆ. ಸರ್ಕಾರದ ರಾಜಕೀಯ ಹಿನ್ನೆಲೆಯಲ್ಲಿ ತಿರುಪತಿ ಲಡ್ಡುವಿನ ಪ್ರಕರಣದಂತ ತೊಂದರೆಗಳು ಆಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಆಯಾ ಪ್ರಾಂತದ ಮಠ, ದೇವಾಲಯಗಳು ಅಲ್ಲಿನ ಜನರ ನೇತೃತ್ವದಲ್ಲಿ ನಡೆಯಬೇಕು. ಇದಕ್ಕೆ ಸನಾತನ ಧರ್ಮ ಪರಿರಕ್ಷಣ ಸಂಬಂಧ ಯೋಜನೆಯನ್ನ ನಾವು ಕೂಡ ಬೆಂಬಲಿಸುತ್ತೇವೆ ಎಂದು ಶ್ರೀಗಳು ಹೇಳಿದರು.
Advertisement
Next Article