For the best experience, open
https://m.navayuganews.com
on your mobile browser.
Advertisement

ಮೈಸೂರು, ಆ.13: ಸಾಂಸ್ಕೃತಿಕ ನಗರಿ ವಿಶ್ವಪ್ರಸಿದ್ಧ ವಾಗಲು ದಸರಾ ಜಂಬೂಸವಾರಿ ಕೂಡಾ ಪ್ರಮುಖ ಕಾರಣವಾಗಿದ್ದು ಈ ಬಾರಿ ಹೆಚ್ಚು ಆನೆಗಳು ಸೇರ್ಪಡೆಯಾಗಲಿವೆ.

Advertisement

ಈ ಬಾರಿ ಮೈಸೂರು ದಸರಾ ಮಹೋತ್ಸವ ಮತ್ತಷ್ಟು ಕಳೆಗಟ್ಟಲಿದ್ದು, ಪ್ರತಿಬಾರಿಗಿಂತ ಹೆಚ್ಚು ಆನೆಗಳು ಭಾಗವಹಿಸಲಿವೆ.

ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ವಿಜೃಂಬಣೆಯ ದಸರಾ ಅದ್ಭುತ ಮೆರವಣಿಗೆ ನೆರವೇರಲಿದೆ.

ಅಭಿಮನ್ಯು, ವರಲಕ್ಷ್ಮಿ ಧನಂಜಯ, ಗೋಪಿ ,ಭೀಮ, ಲಕ್ಷ್ಮಿ, ಕಂಜನ್, ರೋಹಿತ್, ಏಕಲವ್ಯ ಆನೆಗಳು ಮೊದಲ ತಂಡಲ್ಲಿ ಆಗಮಿಸಲಿವೆ. ಎರಡನೇ ತಂಡದಲ್ಲಿ ಪ್ರಶಾಂತ, ಮಹೇಂದ್ರ, ಸುಗ್ರೀವ, ಲಕ್ಷ್ಮಿ, ಹಿರಣ್ಯ ಆನೆಗಳು ಮೈಸೂರಿಗೆ ಬರಲಿವೆ.

ಈ ಆನೆಗಳಲ್ಲದೆ ಹರ್ಷ, ಅಯ್ಯಪ್ಪ, ಪಾರ್ಥ ಸಾರಥಿ ಹಾಗೂ ಮಾಲಾದೇವಿ ಆನೆಗಳನ್ನು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಈ ಬಾರಿ ಕರೆಸಿಕೊಳ್ಳುತ್ತಿರುವುದು‌ ವಿಶೇಷ.

ಆ.21 ರಂದು ಬೆಳಿಗ್ಗೆ 10ಗಂಟೆ 10 ನಿಮಿಷಕ್ಕೆ ಶುಭಲಗ್ನದಲ್ಲಿ ವೀರನಹೊಸಹಳ್ಳಿಯಲ್ಲಿ ಗಜಪಡೆಗೆ ಪೂಜೆ ನೆರವೇರಿಸಿ ನಂತರ ಮೈಸೂರಿನತ್ತ ಗಜಪಯಣ ಪ್ರಾರಂಭವಾಗಲಿದೆ.

Advertisement
Tags :
Advertisement