HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಶರಣರು ಕೊಟ್ಟ ನಿಜಾಚರಣೆಗಳನ್ನು ಪಾಲಿಸಿ:ಇಮ್ಮಡಿ ಉದ್ದಾನ ಸ್ವಾಮೀಜಿ

ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿಯ ಬಸವೇಶ್ವರ ಗುಡಿಯಲ್ಲಿ ಬಸವ ಭಾರತ ಪ್ರತಿಷ್ಠಾನದ ವತಿಯಿಂದ ಲಿಂಗಾಯತ ಧರ್ಮ ಜಾಗೃತಿ ನಡೆಯಿತು.
07:30 PM Aug 09, 2024 IST | ಅಮೃತ ಮೈಸೂರು
Advertisement

ಗುಂಡ್ಲುಪೇಟೆ,ಆ.9: ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿಯ ಬಸವೇಶ್ವರ ಗುಡಿಯಲ್ಲಿ ಬಸವ ಭಾರತ ಪ್ರತಿಷ್ಠಾನದ ವತಿಯಿಂದ ಲಿಂಗಾಯತ ಧರ್ಮ ಜಾಗೃತಿ ನಡೆಯಿತು.

Advertisement

ಈ ವೇಳೆ ಮಾತನಾಡಿದ ಇಮ್ಮಡಿ ಉದ್ದಾನ ಸ್ವಾಮೀಜಿ ಅವರು,ಲಿಂಗಾಯತರು ಹೋಮ ಹವನಗಳನ್ನು ಮಾಡಬಾರದು ಪಂಚಾಂಗ ಜ್ಯೋತಿಷ್ಯಗಳತ್ತ ಸುಳಿಯಬಾರದು ಬಸವಾದಿ ಶರಣರು ಕೊಟ್ಟ ನಿಜಾಚರಣೆಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

ಗುರುವಿನಿಂದ ಲಿಂಗಪಡೆದು ಇಷ್ಟಲಿಂಗ ವನ್ನು ಸದಾ ಪೂಜಿಸಬೇಕು,ಮಕ್ಕಳಿಗೆ ಚಿಕ್ಕಂದಿನಿಂದಲೇ ಲಿಂಗಾಯತ ಧರ್ಮದ ಆಚರಣೆಗಳನ್ನು ಕಲಿಸಬೇಕು ಎಂದು ಹೇಳಿದರು.

ಸಾನಿಧ್ಯ ವಹಿಸಿ ಮಾತನಾಡಿದ ನರಸಿಂಹರಾಜಪುರ ಬಸವಕೇಂದ್ರದ ಶ್ರೀ ಬಸವಯೋಗಿಪ್ರಭುಗಳು,ಮಠಗಳು ಮೂಢನಂಬಿಕೆ ಬಿತ್ತುವ ಕೇಂದ್ರಗಳಾಗಬಾರದು ಬಸವಾದಿ ಶರಣರ ವಚನಗಳನ್ನು ಜನರಿಗೆ ತಲುಪಿಸುವ ಸುಜ್ಞಾನ ಕೇಂದ್ರಗಳಾಗಬೇಕು ತಿಳಿಸಿದರು.

ಲಿಂಗಾಯತ ಮಠಗಳು ಬಸವಾದಿ ಶರಣರು ನೀಡಿದ ಕಾಯಕ ದಾಸೋಹ ಶಿಕ್ಷಣ ವನ್ನು ಮೇಲು ಕೀಳು ಎನ್ನದೆ ಸಮಾನತೆಯಿಂದ ಸೇವೆ ಸಲ್ಲಿಸುತ್ತಿವೆ ಎಂದು ಹೇಳಿದರು.

ಸಂಶೋಧನಾ ವಿದ್ಯಾರ್ಥಿ ಬೀದರ್ ನ ಸಚಿನ್ ಮಾತನಾಡಿ ಮಕ್ಕಳಿಗೆ ಮನೆಯಲ್ಲಿ ಮೊದಲ ಗುರುವಾಗಿ ಒಳ್ಳೆಯ ನಡೆ ನುಡಿಯನ್ನು ಕಲಿಸಬೇಕು ಯುವಕರು ಮಧ್ಯ ಪಾನ ಧೂಮಪಾನ ತಂಬಾಕು ಸೇವನೆ ಮಾಡಬಾರದು ಎಂದು ತಿಳಿಹೇಳಿದರು.

ಶಿಕ್ಷಕ ನಂಜನಗೂಡು ನಂದೀಶ್,
ನಂಜೆದೇವನಪುರದ ಮಾದಪ್ಪ ಹಾಗೂ ಮಡಹಳ್ಳಿಯ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement
Tags :
GundlupetNijaacharaneSharanaru
Advertisement
Next Article