For the best experience, open
https://m.navayuganews.com
on your mobile browser.
Advertisement

ಮೈಸೂರು: ಹಬ್ಬಹರಿದಿನಗಳು ತನ್ನದೆ ಆದ ಹಿನ್ನೆಲೆ,ಪರಂಪರೆ ಜತೆಗೆ ವಿಶೇಷ ಸ್ಥಾನಮಾನ ಹೊಂದಿವೆ ಎಂದು ಮೈಸೂರಿನ ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಬಣ್ಣಿಸಿದರು.

Advertisement

ಮೈಸೂರಿನ ಕುವೆಂಪು ನಗರದಲ್ಲಿರುವ ಶ್ರೀ ಮಾತಾ ವಿದ್ಯಾಸಂಸ್ಥೆಯಲ್ಲಿ ಪದ್ಮಶ್ರೀ ಹಾಗೂ ರವಿಶಂಕರ್ ಅವರು
ಅವರ ಶಾಲೆಯ ಬೊಂಬೆ ಮನೆಯಲ್ಲಿ ಕೂರಿಸಿರುವ ಬೊಂಬೆಗಳನ್ನು
ವೀಕ್ಷಿಸಿ ಅವರು ಮಾತನಾಡಿದರು.

ದಸರಾ ಹಾಗೂ ನವರಾತ್ರಿ ಹಬ್ಬ ಬಹುದೊಡ್ಡ ಸಾಂಸ್ಕೃತಿಕ ಸಂಭ್ರಮವಾಗಿದೆ,ಮೈಸೂರಿನಲ್ಲಿ
ಈ ಹಬ್ಬದಲ್ಲಿ ದಸರಾ ಗೊಂಬೆಗಳನ್ನು ಕೊರಿಸುವ ಮೂಲಕ ವಿಶೇಷವಾಗಿ ಆಚರಿಸುವುದು ಸಂತಸ ತಂದಿದೆ ಎಂದು ಹೇಳಿದರು.

ಸಂಸ್ಕೃತಿ ಮತ್ತು ನಮ್ಮ ಪರಂಪರೆಯ ಉಳಿವಿಗಾಗಿ ಹೋರಾಡುವ ಸಂದರ್ಭ ಎದುರಾಗಿದೆ ಪ್ರತಿಯೊಬ್ಬರು ಅದಕ್ಕಾಗಿ ಶ್ರಮಿಸಬೇಕು ಎಂದು ಶ್ರೀವತ್ಸ ತಿಳಿಸಿದರು.

.

Advertisement
Tags :
Advertisement