HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಪ್ರತಿಯೊಬ್ಬರು ಪ್ರಥಮ ಚಿಕಿತ್ಸೆಯ ತರಬೇತಿ ಪಡೆದಿರಬೇಕು - ರೋಟರಿಯನ್ ಡಾ.ಧರ್ಮರಾಜ್

11:38 AM Aug 28, 2024 IST | ಅಮೃತ ಮೈಸೂರು
Advertisement

ಮೈಸೂರು, ಆ.28 : ಯಾವುದೇ ವ್ಯಕ್ತಿ ಸಣ್ಣ ಅಥವಾ ಗಂಭೀರ ಆನಾರೋಗ್ಯಕ್ಕೆ ಈಡಾದರೇ ತಕ್ಷಣಕ್ಕೆ ಪ್ರಥಮ ಚಿಕಿತ್ಸೆಯು ಸಹಕಾರಿಯಾಗಲಿದೆ. ಇದು ಜೀವವನ್ನು ಸಂರಕ್ಷಿಸಲು ಮತ್ತು ಸ್ಥಿತಿಯನ್ನು ಹದಗೆಡದಂತೆ ತಡೆಯಲು ಅಥವಾ ವೈದ್ಯಕೀಯ ಸೇವೆಗಳು ಬರುವವರೆಗೆ ಚೇತರಿಕೆಯನ್ನು ಉತ್ತೇಜಿಸಲು ಕಾಳಜಿಯನ್ನು ಒದಗಿಸಲಾಗುತ್ತದೆ ಎಂದು ರೋ.ಡಾ.ಧರ್ಮರಾಜ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರೋಟರಿ ಸಂಸ್ಥೆ ನಂಜನಗೂಡು ವತಿಯಿಂದ ಪ್ರಥಮ ಚಿಕಿತ್ಸೆ ಮತ್ತು ಹೃದಯ ಸಂಬಂಧಿ ಅರೋಗ್ಯ ಅರಿವಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ರೋಟರಿ ಸಂಸ್ಥೆಯ ಅಧ್ಯಕ್ಷ ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿ ರೋ.ರೂಪೇಶ್ ಕುಮಾರ್ ರವರು ಪ್ರತಿಯೊಬ್ಬ ವಿದ್ಯಾರ್ಥಿಗಳು ತಾವು ವಿದ್ಯಾಭ್ಯಾಸ ಮಾಡಿದ ಕಾಲೇಜಿಗೆ ಸಹಾಯ ಮಾಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೆ ಮೊಬೈಲ್'ಗೆ ವಿರುದ್ಧವಾಗಿ ಪುಸ್ತಕದ ಕಡೆಗೆ ಗಮನಹರಿಸಿದರೆ ಖಂಡಿತವಾಗಿಯೂ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಡಾ.ಪ್ರಿಯಾರವರು ಹೃದಯಘಾತ, ಅಪಘಾತ ಹಾಗೂ ಇನ್ನಿತರ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಅನಾರೋಗ್ಯ ಪಿಡೀತರನ್ನು ರಕ್ಷಣೆ ಮಾಡಬೇಕು ಎಂಬುದರ ಬಗ್ಗೆ ಪ್ರತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಸಿ.ಆರ್ . ದಿನೇಶ್ ಅಧ್ಯಕ್ಷತೆ ವಹಿಸಿ ಪ್ರಥಮ ಚಿಕಿತ್ಸೆ ಸಾಮಾನ್ಯವಾಗಿ ಮೂಲಭೂತ ವೈದ್ಯಕೀಯ ಅಥವಾ ಮೊದಲ ಪ್ರತಿಕ್ರಿಯೆ ತರಬೇತಿ ಹೊಂದಿರುವ ಯಾರಾದರೂ ಸರಿಯಾಗಿ ನಿರ್ವಹಿಸದರೆ ಅವರ ಜೀವನವನ್ನು ರಕ್ಷಣೆ ಮಾಡಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೋ.ಚೇತನ್, ಹಿರಿಯ ಉಪನ್ಯಾಸಕರಾದ ಅಶ್ವಥ್ ನಾರಾಯಣ್ ಗೌಡ, ಲಿಂಗಣ್ಣಸ್ವಾಮಿ, ರಂಗಸ್ವಾಮಿ, ಟಿ.ಕೆ ರವಿ, ಸ್ವಾಮಿ ಗೌಡ, ಡಾ.ಸುಮಾ, ಮೀನಾ, ಪ್ರಕಾಶ್ ಅದಿಲ್, ರೂಪ ರಾಮನುಜಾ, ನಾಗರಾಜ್ ರೆಡ್ಡಿ, ದಿನೇಶ್, ವಸಂತಕುಮಾರಿ ಹರೀಶ್, ಪದ್ಮ, ವತ್ಸಲಾ, ಎನ್ ನಾಗರಾಜ್, ಸುಮಿತ್ರ ಇತರರು ಇದ್ದರು.

Advertisement
Tags :
Dr.C R DineshFirst aid TrainingMysoreNanjanaguduRotari Clubನಂಜನಗೂಡುಪ್ರಥಮ ಚಿಕಿತ್ಸೆ ತರಬೇತಿಮೈಸೂರುರೋಟರಿ ಸಂಸ್ಥೆಸಿ ಆರ್ ದಿನೇಶ್
Advertisement
Next Article