For the best experience, open
https://m.navayuganews.com
on your mobile browser.
Advertisement

ಚಾಮರಾಜನಗರ,ಆ.11: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋಧ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಚೆಲುವ ಚಾಮರಾಜನಗರ ಭರಚುಕ್ಕಿ ಜಲಪಾತೋತ್ಸವ ವನ್ನು ಸಿಎಂ ಸಿದ್ದರಾಮಯ್ಯ‌ ಉದ್ಘಾಟಿಸಿದರು.

Advertisement

ಈ ವೇಳೆ ಮಾತನಾಡಿದ ಸಿದ್ದು,ಪರಿಸರ ಪ್ರವಾಸೋಧ್ಯಮಕ್ಕೆ ಚಾಮರಾಜನಗರ ಉತ್ತಮ, ಆದರೆ ಆರ್ಥಿಕವಾಗಿ, ಸಾಮಾಜಿಕವಾಗಿ ನಗರ ಬಹಳ ಹಿಂದೆ ಉಳಿದಿದೆ ಎಂದು ಹೇಳಿದರು.

ಚಾಮರಾಜನಗರ ಜಿಲ್ಲೆಗೆ ಕಾಲಿಟ್ಟರೆ ಅಧಿಕಾರ ಹೋಗುತ್ತದೆ ಎಂದು ಬಿಂಬಿಸಿದರು, ಆದರೆ ನಾನು ಮುಖ್ಯಮಂತ್ರಿಯಾಗಿಯೇ ಹತ್ತಕ್ಕೂ ಹೆಚ್ಚು ಬಾರಿ ಜಿಲ್ಲೆಗೆ ಬಂದಿದ್ದೇನೆ, ಇಲ್ಲಿಗೆ ಬಂದಾಗೆಲ್ಲಾ ನನ್ನ ಕುರ್ಚಿ ಹೆಚ್ಚು ಗಟ್ಟಿಯಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

ನೀವು ನನ್ನ ಕುರ್ಚಿ ಅಲುಗಾಡಿಸುತ್ತಲೇ ಇರಿ, ನನ್ನ‌ ಕುರ್ಚಿ ಗಟ್ಟಿ ಆಗುತ್ತಲೇ ಇರುತ್ತೆ ಎಂದು ಬಿಜೆಪಿ-ಜೆಡಿಎಸ್ ನವರಿಗೆ ಸಿದ್ದರಾಮಯ್ಯ ಟಾಂಗ್ ನೀಡಿದರು.

ಯಾರು ಏನೆ ಷಡ್ಯಂತ್ರ ಮಾಡಿದರೂ ನಾನು ಇನ್ನಷ್ಟು ಗಟ್ಟಿಯಾಗಿ ಅಧಿಕಾರದಲ್ಲಿದ್ದು ಬಡವರ, ಶೋಷಿತರ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸ್ತಲೇ ಇರುವೆ ಎಂದು ದೃಢವಾಗಿ ಸಿಎಂ ಹೇಳಿದರು.

ಸಿದ್ದರಾಮಯ್ಯ ಕಾಲುಗುಣ ಸರಿ ಇಲ್ಲ ಅದಕ್ಕೆ ರಾಜ್ಯದಲ್ಲಿ ಮಳೆ ಆಗಿಲ್ಲ ಎಂದು ನನ್ನ ಬಗ್ಗೆ ಬಿಂಬಿಸಿದ್ದರು. ಆದರೆ, ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ,ಜತೆಗೆ ನನ್ನ ಬಗ್ಗೆ ಮೂಡಿಸಿದ್ದ ಮೂಢನಂಬಿಕೆ ಕೂಡ ಸುಳ್ಳಾಯಿತು ಎಂದು ಪ್ರತಿಪಕ್ಷಗಳಿಗೆ ಸಿದ್ದು ತಿರುಗೇಟು ನೀಡಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಪಡಿಸಲು ಸರ್ಕಾರ ಅಗತ್ಯ ಎಲ್ಲ ನೆರವನ್ನೂ ನೀಡಲಿದೆ. ಅಗತ್ಯಬಿದ್ದರೆ ಹೊಸ ಪ್ರವಾಸೋಧ್ಯಮ ನೀತಿಯನ್ನೂ ರಚಿಸಲಾಗುವುದು ಎಂದು ಸಿದ್ದರಾಮ್ಯ ಭರವಸೆ ನೀಡಿದರು.

ಸಚಿವರಾದ ಎಚ್.ಕೆ.ಪಾಟೀಲ್, ಕೆ.ವೆಂಕಟೇಶ್, ಶಿವರಾಜ ತಂಗಡಗಿ, ಶಾಸಕರಾದ ಹನೂರು ಮಂಜುನಾಥ್, ಪುಟ್ಟರಂಗಶೆಟ್ಟಿ, ಗಣೇಶ್ ಪ್ರಸಾದ್, ಸಂಸದರಾದ ಸುನಿಲ್ ಬೋಸ್, ವಿಧಾನ‌ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ ಮತ್ತಿತರರು ಹಾಜರಿದ್ದರು.

Advertisement
Tags :
Advertisement