For the best experience, open
https://m.navayuganews.com
on your mobile browser.
Advertisement

ಮೈಸೂರು: ಆಟ,ಊಟಕ್ಕೆ ಮನುಷ್ಯ ಅಷ್ಟೇ ಅಲ್ಲಾ,ಪ್ರಾಣಿಗಳಲ್ಲೂ ಇದೇ ರೀತಿ ಗಲಾಟೆ ಮಾಡಿಕೊಳ್ಳುತ್ತವೆ.

Advertisement

ಇಲ್ಲೊಂದು ಉದಾಹರಣೆ ಇದೆ.ದಸರಾ ಗಜಪಡೆಯ ಆನೆಗಳೂ ಕೂಡಾ ಊಟದ ವೇಳೆ ಜಗಳ ಮಾಡಿ ಕೆಲ ಕಾಲ ಆತಂಕ ಸೃಷ್ಟಿಸಿದವು.

ಮೈಸೂರು ಅರಮನೆ ಆವರಣದಲ್ಲಿರುವ ದಸರಾ ಗಜಪಡೆಯ ಕಂಜನ್ ಹಾಗೂ ಧನಂಜಯ ಆನೆ ನಡುವೆ ಊಟ ಮಾಡುವಾಗ ಗಲಾಟೆ ನಡೆದಿದೆ.‌ಅದು ಏನಾಯಿತೊ ಧನಂಜಯ ಕಂಜನ್ ಮೇಲೆ ಕೋಪಗೊಂಡಿದ್ದ.

ಆಕ್ರೋಶಗೊಂಡ ಧನಂಜಯ ಕಂಜನ್ ಆನೆ‌ ಮೇಲೆ ದಾಳಿಗೆ ಮುಂದಾಗಿ ಅಟ್ಟಿಸಿಕೊಂಡು ಹೋಗಿದೆ. ಇದರಿಂದ ಬೆದರಿದ ಕಂಜನ್ ಅರಮನೆಯಿಂದ‌ ಹೊರಗೆ ಓಡಿ ಬಂದಿದೆ.

ಆದರೂ ಬಿಡದ ಧನಂಜಯ ಕಂಜನ್ ಆನೆಯನ್ನು ಓಡಿಸಿಕೊಂಡು ಬಂದಿದೆ. ಇದರಿಂದ ಇನ್ನೂ‌ ಗಾಬರಿಗೊಂಡ ಕಂಜನ್ ಬ್ಯಾರಿಕೇಡ್ ತಳ್ಳಿಕೊಂಡು ಹರಗೆ ಓಡಿ ಹೋಗಿದೆ.

ತಕ್ಷಣ ಧನಂಜಯ ಅನೆ ಮೇಲೆ ಇದ್ದ ಮಾವುತ ಧೈರ್ಯ ತೆಗೆದುಕೊಂಡು ಸಮಯಪ್ರಜ್ಞೆ ತೋರಿ ಕೋಪಗೊಂಡಿದ್ದ ಧನಂಜಯನನ್ನು ನಿಯಂತ್ರಣಕ್ಕೆ ತಂದು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಂತರ ಕಂಜನ್ ಬಳಿ ಬಂದ ಮಾವುತ ಅದನ್ನು ಅರಮನೆ‌ ಒಳಗೆ ಕರೆ ತಂದಿದ್ದಾನೆ, ಅರಣ್ಯ ಇಲಾಖೆ ಅಧಿಕಾರಿಗಳು, ಮಾವುತರ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದಂತಾಯಿತು.

Advertisement
Tags :
Advertisement