ಕುವೆಂಪು ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ
ಮೈಸೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಜಿಲ್ಲಾಡಳಿತದ ವತಿಯಿಂದ ಇಂದು ವಿಶ್ವ ಮಾನವ ಕುವೆಂಪು ಅವರ ಜಯಂತಿ ಕುರಿತು ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಯಿತು.
07:00 PM Dec 19, 2024 IST
|
ಅಮೃತ ಮೈಸೂರು
Advertisement
ಮೈಸೂರು: ವಿಶ್ವ ಮಾನವ ಕುವೆಂಪು ಜಯಂತಿಯನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.
Advertisement
ಮೈಸೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಜಿಲ್ಲಾಡಳಿತದ ವತಿಯಿಂದ ಇಂದು ಹಮ್ಮಿಕೊಂಡಿದ್ದ ವಿಶ್ವ ಮಾನವ ಕುವೆಂಪು ಅವರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಮೈಸೂರಿನ ಕಲಾಮಂದಿರದಲ್ಲಿ ಡಿಸೆಂಬರ್ 29 ರಂದು ಅದ್ದೂರಿಯಾಗಿ ಕುವೆಂಪು ಜಯಂತಿ ಆಚರಿಸಲು ನಿರ್ಧರಿಸಲಾಯಿತು.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ ಡಿ ಸುದರ್ಶನ್ ಕಾರ್ಯಕ್ರಮದ ರೂಪ ರೇಷಗಳನ್ನು ತಿಳಿಸಿದರು.
ಅಧ್ಯಕ್ಷತೆಯನ್ನು ಅಪರ ಜಿಲ್ಲಾಧಿಕಾರಿ ಶಿವರಾಜ್ ರವರು ವಹಿಸಿದ್ದರು.
ಸಭೆಯಲ್ಲಿ ಕನ್ನಡ ಪರ ಹೋರಾಟಗಾರರಾದ ಬಿ ಎ. ಶಿವಶಂಕರ್, ಮೋಹನ್ ಕುಮಾರ್ ಗೌಡ, ಯಮುನಾ, ಭಾನು , ತೇಜೇಶ್ ಲೋಕೇಶ್ ಗೌಡ, ಅರವಿಂದ್ ಶರ್ಮಾ, ಹನುಮಂತಯ್ಯ ಸೇರಿದಂತೆ ಹಲವಾರು ಸಂಘಟನೆಗಳವರು ಭಾಗವಹಿಸಿದ್ದರು.
Advertisement
Next Article