HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ರಕ್ತದಾನ ಮಾಡಿದ ಡಿಎವಿ ಪಬ್ಲಿಕ್ ಶಾಲೆಯ ಶಿಕ್ಷಕರು, ಶಿಕ್ಷಕೇತರರು, ಚಾಲಕರು, ಮಕ್ಕಳ ಪೋಷಕರು

04:08 PM Aug 13, 2024 IST | Navayuga News
Advertisement

ಬೆಂಗಳೂರು ಆ.12 : ಕನಕಪುರ ರಸ್ತೆಯ ಕಗ್ಗಲಿಪುರದ ದಯಾನಂದ ಆರ್ಯ ವಿದ್ಯಾ (ಡಿಎವಿ) ಪಬ್ಲಿಕ್ ಶಾಲೆ, ನೆರಳು ನಾಟಕ ತಂಡ, ಬೆಂಗಳೂರು ಲಯನ್ಸ್ ಕ್ಲಬ್ ಆದರ್ಶ ಮತ್ತು ಬಿಎಸ್'ಕೆ ಜೀವಾಶ್ರಯ ರಕ್ತ ಕೇಂದ್ರದ ಜಂಟಿ ಸಂಯುಕ್ತಾಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಓಂ ಶಾಂತಿಧಾಮ ಟಸ್ಟ್'ನ ಡಿಎವಿ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳ ಪೋಷಕರು, ಶಾಲೆಯ ಬಸ್ ಚಾಲಕರು ಈ ವೇಳೆ ರಕ್ತದಾನ ಮಾಡಿ ಜೀವ ಉಳಿಸುವ ಪುಣ್ಯ ಕೆಲಸಕ್ಕೆ ಕೈ ಜೋಡಿಸುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆದರು.

Advertisement

ಶಾಲೆಯ ನಿರ್ದೇಶಕಿ ಶ್ರದ್ಧಾ ಪ್ರಮೋದ್, ಪ್ರಾಂಶುಪಾಲೆ ಮಾಲಿನಿ ಅಶೋಕ್, ನಿರ್ವಾಹಕ ಶ್ರೀಕರ ಯಲಮಲಿ, ಶಿಬಿರ ಅಯೋಜನೆಯ ನೇತೃತ್ವ ವಹಿಸಿದ್ದ ವೇದಾವೃತ ರಾವ್ ಅವರ ಪ್ರಯತ್ನದ ಫಲವಾಗಿ 25ಕ್ಕೂ ಹೆಚ್ಚು ಯೂನಿಟ್ ಗಳು ಸಂಗ್ರಹವಾದವು.

ನೆರಳು ತಂಡದ ಆದರ್ಶ್ ಹೆಚ್.ಎಸ್, ರಾಹುಲ್ ರವೀಂದ್ರ, ರಮ್ಯಾ ಎನ್, ಪ್ರವೀಣ್ ಹೆಚ್.ಪಿ, ಪರಶಿವಮೂರ್ತಿ ಬಿ, ಪೂಜಾ ಎ.ಎಂ ಅವರುಗಳು ವಾಲೆಂಟರಿಗಳಾಗಿ ಶಿಬಿರವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ರಕ್ತ ಕೇಂದ್ರದ ಆರೋಗ್ಯ ಅಧಿಕಾರಿ ಪವನ್ ವಿ ಕೇಸರಿ, ಲಯನ್ಸ್ ಆದರ್ಶ ಕ್ಲಬ್'ನ ಜಂಟಿ ಕಾರ್ಯದರ್ಶಿ ರಚನಾ ಮಂಜುನಾಥ್, ರಕ್ತಕೇಂದ್ರದ ನಿರ್ದೇಶಕರಾದ ವೆಂಕಟರೆಡ್ಡಿ.ಕೆ ಇದ್ದರು.

Advertisement
Advertisement
Next Article