For the best experience, open
https://m.navayuganews.com
on your mobile browser.
Advertisement

ಮೈಸೂರು: ನಾಡಹಬ್ಬ ದಸರಾದ ಎಲ್ಲ ಕಾರ್ಯಕ್ರಮ ಮತ್ತು ಪ್ರವಾಸಿ ತಾಣಗಳನ್ನ ವೀಕ್ಷಣೆ ಮಾಡಲು ಒಂದು ಗೋಲ್ಡ್‌ ಕಾರ್ಡ್‌ ಬೆಲೆ 6,500 ರೂ ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ತಿಳಿಸಿದ್ದಾರೆ‌

Advertisement

ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಗೋಲ್ಡ್‌ ಕಾರ್ಡ್‌ ಬೆಲೆ, 6,500 ರೂಪಾಯಿ, ಇದನ್ನ ಪಡೆದವರು ದಸರಾ ಸಂದರ್ಭದಲ್ಲಿ ಜಂಬೂ ಸವಾರಿ, ಬನ್ನಿಮಂಟಪದ ಪಂಜಿನ ಕವಾಯತು, ಚಾಮುಂಡಿ ಬೆಟ್ಟ, ಮೃಗಾಲಯ ಹಾಗೂ ಅರಮನೆ ಎಲ್ಲವನ್ನು ವೀಕ್ಷಣೆ ಮಾಡಬಹುದು ಎಂದು ಹೇಳಿದರು.

ಆನ್​​ಲೈನ್​ನಲ್ಲಿ ಈ ಗೋಲ್ಡ್‌ ಕಾರ್ಡ್‌ ಸೆಪ್ಟೆಂಬರ್‌ 26 ರಿಂದ ಸೆಪ್ಟೆಂಬರ್‌ 30ರ ವರೆಗೆ ಐದು ದಿನಗಳ ಕಾಲ ಲಭ್ಯವಿರಲಿದೆ ಎಂದು ಅವರು ಮಾಹಿತಿ ನೀಡಿದರು.

ಇದಲ್ಲದೇ 3,500 ರೂ ಗೋಲ್ಡ್‌ ಪಾಸ್‌ ಪಡೆದರೆ ಒಬ್ಬರು ಜಂಬೂ ಸವಾರಿ ಮಾತ್ರ ವೀಕ್ಷಣೆ ಮಾಡಬಹುದು. ಇದರ ಜತೆಗೆ ಪಂಜಿನ ಕವಾಯತು ವೀಕ್ಷಣೆ ಮಾಡಲು ಒಂದು ಸಾವಿರ ರೂಪಾಯಿಯ ಗೋಲ್ಡ್‌ ಕಾರ್ಡ್‌ ಪಡೆಯಬೇಕಾಗುತ್ತದೆ.

ಈ ಎಲ್ಲಾ ಗೋಲ್ಡ್‌ ಪಾಸ್​ಗಳು ಆನ್​ಲೈನ್​ನಲ್ಲಿ ಖರೀದಿ ಮಾಡಬೇಕು. ಈ ಬಾರಿ 1,000 ದಿಂದ 1,500 ಗೋಲ್ಡ್‌ ಪಾಸ್​ಗಳನ್ನ ಆನ್​ಲೈನ್​ನಲ್ಲಿ ಖರೀದಿ ಮಾಡಬಹುದಾಗಿದೆ ಎಂದು ಮಹದೇವಪ್ಪ ತಿಳಿಸಿದರು.

Advertisement
Tags :
Advertisement