HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಸಿ.ಟಿ ರವಿಗೆ ಅನಾಧೇಮಯ ವ್ಯಕ್ತಿಗಳಿಂದ ಕೊಲೆ ಬೆದರಿಕೆ

ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮತ್ತು ಅವರ ಪುತ್ರ ಸೂರ್ಯನಿಗೆ ಅನಾಮಧೇಯ ವ್ಯಕ್ತಿಗಳು ಕೊಲೆ ಬೆದರಿಕೆ ಪತ್ರ ಬರೆದಿದ್ದಾರೆ.
03:46 PM Jan 11, 2025 IST | ಅಮೃತ ಮೈಸೂರು
Advertisement

ಚಿಕ್ಕಮಗಳೂರು: ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮತ್ತು ಅವರ ಪುತ್ರ ಸೂರ್ಯನಿಗೆ ಅನಾಮಧೇಯ ವ್ಯಕ್ತಿಗಳು ಕೊಲೆ ಬೆದರಿಕೆ ಪತ್ರ ಬರೆದಿದ್ದಾರೆ.

Advertisement

ಸಿ.ಟಿ ರವಿ ಸ್ವಗೃಹಕ್ಕೆ ಅನಾಮಧೇಯ ವ್ಯಕ್ತಿಗಳು ಪತ್ರ ಕಳುಹಿಸಿದ್ದಾರೆ. ಇನ್ನೂ 15 ದಿನದೊಳಗೆ ಚಿಕ್ಕಮಗಳೂರಿನಿಂದ ಬೆಳಗಾವಿಗೆ ಬಂದು ಅಭಿನೇತ್ರಿಯ ಕೈಕಾಲು ಹಿಡಿದು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಿಮ್ಮ ಮನೆಗೆ ನುಗ್ಗಿ ನಿಮ್ಮ ಕೈಕಾಲ ಮುರಿದು ಸಾಯಿಸುತ್ತೇವೆ, ನಿನ್ನ ಮಗನನ್ನೂ ಸಾಯಿಸುತ್ತೇವೆ ಹುಷಾರ್ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ಕುರಿತು ಸಿ.ಟಿ ರವಿ ಅವರು ಚಿಕ್ಕಮಗಳೂರು ನಗರದ ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Advertisement
Tags :
Chikkamagaluru
Advertisement
Next Article