HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಅರಣ್ಯ ಸಂಪತ್ತನ್ನು ಉಳಿಸುವಂತೆ ಜಾಗೃತಿ ಮೂಡಿಸಿ, ಮುಂದಿನ ಪೀಳಿಗೆಗೆ ಉಡುಗೊರೆಯಾಗಿ ನೀಡಬೇಕು - ಹೆಚ್ .ಸಿ ಕಾಂತರಾಜು

12:30 AM Aug 31, 2024 IST | Navayuga News
Advertisement

ಮೈಸೂರು ಆ.30 : ಅರಣ್ಯದಲ್ಲಿರುವ ಪ್ರಾಣಿ ಮತ್ತು ಸಸ್ಯ ಸಂಪತ್ತಿನ್ನು ರಕ್ಷಿಸುವ ಮೂಲಕ ಪರೋಕ್ಷವಾಗಿ ಪರಿಸರದ ಸಮತೋಲನ ಸಾಧಿಸಲು ಸಾಧ್ಯ ಎಂದು ನಿವೃತ್ತ ಐಎಫ್'ಎಸ್ ಅಧಿಕಾರಿ ಲಯನ್ ಹೆಚ್ .ಸಿ. ಕಾಂತರಾಜು ರವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅಂಬಾಸಿಡರಸ್ ಲಯನ್ಸ್ ಸಂಸ್ಥೆಯ ಮಾಸಿಕ ಉಪನ್ಯಾಸಕ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು ಹಿಂದಿನ ಕಾಲದಲ್ಲಿ ರಾಜರು ಮತ್ತು ಶ್ರೀಮಂತರು ತಮ್ಮ ಹವ್ಯಾಸಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡಿ ಸಾವಿರಾರು ಪ್ರಾಣಿಗಳನ್ನು ಕೊಂದು ಹಾಕಿದ್ದಾರೆ.

Advertisement

ಇಂದಿನ ಕಾಲದಲ್ಲಿ ಪ್ರಾಣಿಗಳ ಚರ್ಮ ಹಾಗೂ ಅಂಗಾಂಗಗಳ ಹಣದ ಆಸೆಗೆ ಪ್ರಾಣಿಸಂಕುಲವನ್ನು ನಾಶ ಮಾಡುತ್ತಿರುವುದು ತೀರಾ ವಿಪರ್ಯಾಸ . ಹೀಗಾಗಿ ಹಲವು ಪ್ರಾಣಿ ಸಂಕುಲಗಳು ಈ ಜಗತ್ತಿನಿಂದ ಕಣ್ಮರೆಯಾಗಿವೆ.

ಮುಂದಿನ ತಲೆಮಾರಿನವರಿಗೆ ಏನಾದರೂ ಕೊಡಬೇಕು ಅಂದರೆ ನಾವೆಲ್ಲ ಪರಿಸರದ ಬಗ್ಗೆ ಜಾಗೃತರಾಗಿ ಪ್ರಕೃತಿದತ್ತವಾಗಿರುವ ಸುಂದರ ಪರಿಸರವನ್ನು ಕಾಪಾಡಿಕೊಳ್ಳುವ ಮನಸ್ಥಿತಿ ಪ್ರತಿಯೊಬ್ಬರಿಗೂ ರೂಪಿಸಬೇಕು. ಎಂದರು.

ಸಂಸ್ಥೆಯ ಅಧ್ಯಕ್ಷರಾದ ಲಯನ್ ವಿ. ಶ್ರೀಧರ್, ಕಾರ್ಯದರ್ಶಿ ಲಯನ್ ಪಿ. ಮಲ್ಲಿಕಾರ್ಜುನಪ್ಪ, ಖಜಾಂಚಿ ಹೆಚ್ .ಆರ್ .ರವಿಚಂದ್ರ, ಪ್ರಾಂತೀಯ ಅಧ್ಯಕ್ಷ ಲಯನ್ ಕೆ.ಆರ್ .ಭಾಸ್ಕರಾನಂದ, ಜಿಲ್ಲಾ ಅಧ್ಯಕ್ಷ ಲಯನ್ ಸಿ.ಆರ್ .ದಿನೇಶ್, ಸಂಸ್ಥೆಯ ಸದಸ್ಯರಾದ ಹೆಚ್.ಕೆ ಪ್ರಸನ್ನ, ರವಿ, ರಾಮಚಂದ್ರ , ಮನು, ಕೆ.ಟಿ.ವಿಷ್ಣು, ಪ್ರಸಾದ್, ಎ.ಎಲ್ ಉಮೇಶ್ ಇತರರು ಉಪಸ್ಥಿತರಿದ್ದರು.

Advertisement
Tags :
Lion H C Kantha RajuLions culb ambassadorMysoreNext GenerationSave ForestSave wildlife
Advertisement
Next Article