For the best experience, open
https://m.navayuganews.com
on your mobile browser.
Advertisement

ಮೈಸೂರು, ಆ.9: ರಾಜ್ಯ ಸರಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಹೋರಾಟ ನಡೆಸುತ್ತಿರುವಾಗಲೇ ಕಾಂಗ್ರೆಸ್ ನವರು ಜೆಡಿಎಸ್ ವಿರುದ್ಧ ಪ್ಲೆಕ್ಸ್ ಸಮರ ಸೇರಿದ್ದಾರೆ.

Advertisement

ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ವಿರುದ್ಧ ಕೇಳಿ ಬಂದಿರುವ ಮೂಡ ಹಗರಣ ವಿಚಾರ ಮುಂದಿಟ್ಟುಕೊಂಡು ಬಿಜೆಪಿ,ಜೆಡಿಎಸ್ ಪಾದಯಾತ್ರೆ ಮಾಡುತ್ತಿವೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡಾ ಜನಾಂದೋಲನ ಹಮ್ಮಿಕೊಂಡು,ಸಮಾವೇಶ ನಡೆಸಿ,ಶಕ್ತಿ ಪ್ರದರ್ಶನ ಮಾಡಿದೆ.

ಶುಕ್ರವಾರ ಸಮಾರೋಪ ಮೈಸೂರಿನಲ್ಲಿ ನಡೆಯುತ್ತಿದ್ದು, ಜೆಡಿಎಸ್ ವಿರುದ್ಧ ಪ್ಲೆಕ್ಸ್ ಹಾಕುವ ಅವರ ಬಣ್ಣ ಬಯಲು ಮಾಡಿದೆ.

ನಗರದ ಹಲವೆಡೆ ಕಾಂಗ್ರೆಸ್ ನವರು ಜೆಡಿಎಸ್ ವಿರುದ್ಧ ಪ್ಲೆಕ್ಸ್ ಗಳನ್ನು ಹಾಕಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ.

ಅದರಲ್ಲೂ ದೇವೇಗೌಡರ ಕುಟುಂಬದವರು ಮೂಡ ನಿವೇಶನ ಪಡೆದಿದ್ದಾರೆಂದು ಪ್ಲೆಕ್ಸ್ ಗಳನ್ನು ಸಮಾವೇಶದ ಸ್ಥಳ ಸೇರಿದಂತೆ‌ ಅನೇಕ ಕಡೆ ಹಾಕಲಾಗಿದೆ.

ಇದನ್ನು ವಿರೋಧಿಸಿ ಬೆಳಿಗ್ಗೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದರು.

Advertisement
Tags :
Advertisement