ರಾಜ್ಯ ಅಭಿವೃದ್ದಿ ಮಾಡದೆ ಭ್ರಷ್ಟಾಚಾರದಲ್ಲಿ ಕಾಂಗ್ರೆಸ್: ವಿಜಯೇಂದ್ರ
ಬಿಜೆಪಿ ಜೆಡಿಎಸ್ ಜಂಟಿಯಾಗಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಯಲ್ಲಿಂದು ವಿಜಯೇಂದ್ರ, ನಿಖಿಲ್ ಕುಮಾರಸ್ವಾಮಿ, ಅಶ್ವತ್ ನಾರಾಯಣ,ಶ್ರೀರಾಮುಲು ಭಾಗವಹಿಸಿದ್ದರು
06:46 PM Aug 06, 2024 IST
|
ಅಮೃತ ಮೈಸೂರು
Advertisement
ಮಂಡ್ಯ,ಆ.6: ಕಾಂಗ್ರೆಸ್ ನವರು ಅನೇಕ ಭರವಸೆ ನೀಡಿ ಅಧಿಕಾರಕ್ಕೆ ಬಂದರು, ಆದರೆ ರಾಜ್ಯವನ್ನು ಅಭಿವೃದ್ದಿ ಮಾಡದೆ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
Advertisement
ಬಿಜೆಪಿ ಜೆಡಿಎಸ್ ಜಂಟಿಯಾಗಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಯ ನಾಲ್ಕನೇ ದಿನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನ ಕಿತ್ತೆಸೆಯಬೇಕೆಂಬ ಸಂಕಲ್ಪ ಮಾಡಯೇ ಪಾದಯಾತ್ರೆ ಮಾಡುತ್ತಿದ್ದೇವೆ, ರಾಜ್ಯದ ಜನರಿಗೆ ಇದು ಚುನಾಯಿತ ಸರಕಾರ ಎಂದು ಅನಿಸುತ್ತಿಲ್ಲ ಇಂತಹ ಭ್ರಷ್ಟ ಸರಕಾರ ಮತ್ತು ಭ್ರಷ್ಟ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕಿತ್ತೆಸೆಯಬೇಕು
ಎಂದು ವಿಜಯೇಂದ್ರ ಹೇಳಿದರು.
Advertisement
Next Article