HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಸಿಎಂ ವಿಚಾರಣೆ ಸರಿಯಾದ ದಿಕ್ಕಿನಲ್ಲಿ ಸಾಗಿಲ್ಲ:ಸ್ನೇಹಮಯಿ ಕೃಷ್ಣ

07:04 PM Nov 07, 2024 IST | ಅಮೃತ ಮೈಸೂರು
Advertisement

ಮೈಸೂರು: ಒಳ ಒಪ್ಪಂದದ ರೀತಿ ಲೋಕಾಯುಕ್ತ ಎಸ್ಪಿ ಮುಖ್ಯ ಮಂತ್ರಿಗಳ ವಿಚಾರಣೆ ಮಾಡಿದ್ದು,ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಿಲ್ಲ ಎಂದು ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.

Advertisement

ಲೋಕಾಯುಕ್ತ ಎಸ್ಪಿ ಉದೇಶ್ ಕರ್ತವ್ಯಲೋಪ ಎಸಗಿದ್ದಾರೆ. ನಿನ್ನೆ ನಡೆದ ಸಿಎಂ ವಿಚಾರಣೆ ಒಳ ಒಪ್ಪಂದದ ರೀತಿ ಇದೆ. ಇದುವರೆಗೆ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನೂ ಲೋಕಾಯುಕ್ತರು ವಶಕ್ಕೆ ಪಡೆದಿಲ್ಲ. ದಾಖಲೆಗಳ ಮಹಜರ್ ಸರಿಯಾಗಿ ಆಗಿಲ್ಲ. ಹೀಗಾಗಿ ವಿಚಾರಣೆ ಸರಿಯಾದ ಟ್ರ‍್ಯಾಕ್‌ಗೆ ತನ್ನಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಮುಖ್ಯ ಮಂತ್ರಿಗಳನ್ನು ವಿಚಾರಣೆಗೆ ಒಳಪಡಿಸುವ ನಿಟ್ಟಿನಲ್ಲಿ ಹಲವಾರು ದಾಖಲೆಗಳನ್ನು ಇಟ್ಟುಕೊಂಡು ನಾನು ಮನವಿ ಪತ್ರವನ್ನು ಕೊಟ್ಟಿದ್ದೇನೆ. ಜೊತೆಗೆ ಕೆಲವು ಸಾಕ್ಷ್ಯ ಪತ್ರಗಳನ್ನು ಅವರು ಸಂಗ್ರಹ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಸಿಎಂ ರನ್ನು ವಿವರವಾಗಿ ವಿಚಾರಣೆಗೆ ಒಳಪಡಿಸಬೇಕಾಗಿತ್ತು.ಹಾಗೆ ವಿಚಾರಣೆ ಮಾಡಬೇಕಾದರೆ ಹಲವಾರು ಗಂಟೆಗಳ ಸಮಯಾವಕಾಶ ಬೇಕಾಗುತ್ತದೆ. ಆದರೆ ಇಲ್ಲಿ ಆರೋಪಿ ಮೊದಲೇ ವಿಚಾರಣೆಗೆ ಹಾಜರಾಗುವ ಸಮಯವನ್ನು ತನಿಖಾಧಿಕಾರಿ ನಿಗದಿ ಮಾಡುತ್ತಾರೆ. ವಿಚಾರಣೆಯಿಂದ ಹೋಗುವ ಸಮಯವನ್ನು ಸಿಎಂ ನಿಗದಿ ಮಾಡಿದ್ದಾರೆ ಇದನ್ನೆಲ್ಲಾ ನೋಡುವಾಗ ಸಾಕಷ್ಟು ಅನುಮಾನಗಳು ಬರುತ್ತದೆ ಎಂದು ಹೇಳಿದರು.

ಈವರೆಗೆ ನಡೆದ ತನಿಖೆಯ ಬಗ್ಗೆ ನನಗೆ ತೃಪ್ತಿ ಇಲ್ಲ. ಇಷ್ಟು ದೊಡ್ಡ ಹಗರಣ ಮಾಡಿರುವಾಗ ಒಬ್ಬರನ್ನಾದರೂ ಬಂಧಿಸಬೇಕಿತ್ತು ಎಂದು ಸ್ನೇಹಮಯಿ ಕೃಷ್ಣ ತಿಳಿಸಿದರು.

Advertisement
Tags :
MysoreSnehamai Krishna
Advertisement
Next Article