HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಕಾರು - ಗೂಡ್ಸ್ ವಾಹನ ಡಿಕ್ಕಿ:ಇಬ್ಬರು ಯುವಕರು ಸಾವು

ಬೆಳಗಾವಿ ಜಿಲ್ಲೆಯ ನಾಗರಮುನ್ನೋಳಿ ಬಳಿ ಕಾರು ಮತ್ತು ಗೂಡ್ಸ್ ವಾಹನಗಳು‌ ಡಿಕ್ಕಿಯಾದ ಪರಿಣಾಮ ವಾಹನಗಳು ಜಕಂಗೊಂಡಿವೆ.
07:33 PM Aug 10, 2024 IST | ಅಮೃತ ಮೈಸೂರು
Advertisement

ಬೆಳಗಾವಿ, ಆ.10: ಕಾರು ಮತ್ತು ಗೂಡ್ಸ್ ವಾಹನಗಳು‌ ಡಿಕ್ಕಿಯಾದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ನಾಗರಮುನ್ನೋಳಿ ಬಳಿ ನಡೆದಿದೆ.

Advertisement

ನಾಗರಮುನ್ನೋಳಿಯ ಬೆಳಕೂಡ ಗೇಟ್ ಬಳಿ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ರಾಕೇಶ ವಾಟಕರ್ (23), ಸೌರಭ ಕುಲಕರ್ಣೀ (22) ಮೃತಪಟ್ಟ ದುರ್ದೈವಿಗಳು.

ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಚಿಕ್ಕೋಡಿ ಡಿವೈಎಸ್ಪಿ ಗೋಪಾಲ ಕೃಷ್ಣ ಗೌಡರ, ಸಿಪಿಐ ವಿಶ್ವನಾಥ ಚೌಗಲಾ, ಪಿಎಸ್ಐ ರೂಪಾಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಿಕ್ಕೋಡಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement
Tags :
BelagaviCarGoods Vehicle
Advertisement
Next Article