HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಮುಡಾದಲ್ಲಿ ಫೈಲ್ ಸುಟ್ಟಿದ್ದಾರೆ:ಮನೆ ಕಟ್ಟಲು ಅನುಮತಿ ನೀಡಬೇಡಿ- ಶ್ರೀವತ್ಸ ಆಗ್ರಹ

05:42 PM Nov 09, 2024 IST | ಅಮೃತ ಮೈಸೂರು
Advertisement

ಮೈಸೂರು: ಮುಡಾದಲ್ಲಿ ಕೆಲವು ಸೈಟ್‌ಗಳ ದಾಖಲಾತಿಗಳನ್ನು ಸುಟ್ಟು ಹಾಕಿದ್ದಾರೆ,ಹಾಗಾಗಿ 50:50 ಅನುಪಾತದಲ್ಲಿ ಮನೆ ಕಟ್ಟುವುದಕ್ಕೆ ಅನುಮತಿ ನೀಡಬೇಡಬಾರದೆಂದು ಶಾಸಕ ಶ್ರೀವತ್ಸ ಆಗ್ರಹಿಸಿದ್ದಾರೆ.

Advertisement

ಕೆಲವು ಸೈಟುಗಳ ದಾಖಲೆಗಳನ್ನ ತೆಗೆದುಕೊಂಡು ಹೋಗಿದ್ದಾರೆ ಎಂದು ಮುಡಾ ಸಭೆಯಲ್ಲೇ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಈ ನಡುವೆ 50:50 ಅನುಪಾತದಲ್ಲಿ ಮನೆ ನಿರ್ಮಿಸಲು ನಕ್ಷೆಗೆ ಅನುಮತಿ ಕೊಡುವುದನ್ನು ನಿಲ್ಲಿಸಬೇಕು. ಈಗಾಗಲೇ ನಕ್ಷೆಗೆ ಅನುಮತಿ ಪಡೆದು ಕಾಮಗಾರಿ ಮಾಡುತ್ತಿರುವವರಿಗೆ ತಡೆಯಾಜ್ಞೆ ನೀಡಿ ಎಂದು ಮನವಿ ಮಾಡಿದ್ದಾರೆ.

250 ರಿಂದ 300 ಮಂದಿ ಮನೆ ಕಟ್ಟುವುದಕ್ಕೆ ಪ್ಲ್ಯಾನ್‌ ಮಾಡಿದ್ದಾರೆ. ಖಾಲಿ ಸೈಟ್‌ ಇದ್ದರೆ ಮುಡಾ ಜಪ್ತಿ ಮಾಡಿಕೊಳ್ಳುವುದು ಸುಲಭ ಆಗುತ್ತದೆ. ಒಂದು ವೇಳೆ ನಿರ್ಮಾಣ ಪ್ರಾರಂಭವಾಗಿದ್ದರೆ ಅದನ್ನು ತಡೆಯಬೇಕಾಗುತ್ತದೆ. ಈ ಎರಡೂ ವಿಚಾರವನ್ನು ಗಮನದಲ್ಲಿಟ್ಟುಕೊಂಡು ನಾನು ಮುಡಾಕ್ಕೆ ಮನವಿ ಪತ್ರ ಕೊಟ್ಟಿದ್ದೇನೆ ಎಂದು ತಿಳಿಸಿದರು.

Advertisement
Tags :
MysorePermussionShrivatsa
Advertisement
Next Article