For the best experience, open
https://m.navayuganews.com
on your mobile browser.
Advertisement

ಬೆಂಗಳೂರು: ಬಿಎಂಟಿಸಿ ಚಾಲಕರು ನಿರ್ವಾಹಕರ ಮೇಲೆ ಯಾರೋ ಕೆಲವರು ಪುಂಡರು ಹಲ್ಲೆ ನಡೆಸಿರುವುದಕ್ಕೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಅಲ್ಲದೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ್ ಅವರಿಗೆ ಈ ಕುರಿತು ಪತ್ರ ಬರೆದಿದ್ದು ಇನ್ನು ಮುಂದೆ ಯಾರೇ ಆಗಲಿ ಬಿಎಂಟಿಸಿ ಚಾಲಕರು ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ್ದು ಕಂಡುಬಂದರೆ ತಕ್ಷಣ ಅವರನ್ನು ಹಿಡಿದು ಕಠಿಣ ಶಿಕ್ಷೆ ನೀಡುವಂತೆ ಸೂಚಿಸಿದ್ದಾರೆ.

ಅಕ್ಟೋಬರ್ ಒಂದೇ ತಿಂಗಳಿನಲ್ಲಿ ಬಿಎಂಟಿಸಿ ಚಾಲಕರು ನಿರ್ವಾಹಕರ ಮೇಲೆ ನಾಲ್ಕು ಕಡೆ ಹಲ್ಲೆ ನಡೆದಿದೆ ಹಾಗಾಗಿ ಚಾಲಕರು ನಿರ್ವಾಹಕರು ಭಯ ಗೊಂಡಿದ್ದಾರೆ ಇದು ಸಹಜವು ಹೌದು, ಈ ರೀತಿ ಜನರು ವರ್ತಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಎಂಟಿಸಿ ಅಷ್ಟೇ ಅಲ್ಲ ರಾಜ್ಯದಲ್ಲಿ ಸಾರಿಗೆ ನೌಕರರ ಮೇಲೆ ಎಲ್ಲೂ ಹಲ್ಲೆ ಅಥವಾ ಇತರೆ ದೌರ್ಜನ್ಯ ನಡೆಯ ಕೂಡದು ಒಂದು ವೇಳೆ ಆ ರೀತಿ ನಡೆದದ್ದು ಕಂಡು ಬಂದರೆ ಸಾರ್ವಜನಿಕರೇ ಹಿಡಿದು ಕೊಡಬೇಕೆಂದು ಮನವಿ ಮಾಡಿದ್ದಾರೆ.

ಇಂತಹ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ನಮ್ಮ ಚಾಲಕರು ನಿರ್ವಾಹಕರು ಕೆಲಸ ಮಾಡಲು ಹಿಂದೆಗೆಯುವಂತಾಗಿದೆ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು ಎಂದು ಹೇಳಿದ್ದಾರೆ.

ಚಾಲಕರು ನಿರ್ವಾಹಕರು ಕೂಡ ನಮ್ಮವರೇ ಎಂದು ತಿಳಿದುಕೊಳ್ಳಿ ಅವರು ನಿಮ್ಮನೆಯಲ್ಲಿ ಒಬ್ಬರೆಂದು ತಿಳಿಯಿರಿ. ಅವರ ಮೇಲೆ ಸುಮ್ಮ ಸುಮ್ಮನೇ ದೌರ್ಜನ್ಯ ನಡೆಸುವುದು ಸರಿಯಲ್ಲ ಇದನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.

Advertisement
Tags :
Advertisement