For the best experience, open
https://m.navayuganews.com
on your mobile browser.
Advertisement

ಮೈಸೂರು,ಆ.15:ಬಸವಣ್ಣನವರು ಸಕಲ ಜೀವರಾಶಿಗಳಿಗೆ ಲೇಸು ಬಯಸುವ ಮೂಲಕ ದೇವ ಮಾನವರಾಗಿದ್ದಾರೆ ಎಂದು
ದೇವನೂರಿನ ಪ್ರಾಧ್ಯಾಪಕ ಡಾ.ಡಿ.ಎಮ್ ಮಹೇಂದ್ರ ಮೂರ್ತಿ ತಿಳಿಸಿದರು.

Advertisement

ಮಲೆಯೂರು ಪ್ರಭುರವರು ಕುವೆಂಪು ನಗರದಲ್ಲಿ ನಡೆಸುತ್ತಿರುವ ಹಿರಿಯ ನಾಗರಿಕರ ಯೋಗ ಕ್ಷೇಮ ಕೇಂದ್ರದಲ್ಲಿ ಬಸವ ಭಾರತ ಪ್ರತಿಷ್ಠಾನದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬಸವ ತತ್ವ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಕಲ್ಲು ಮಣ್ಣುಗಳಿಗೆ ಹಾಲು ಎರೆಯುವ ಮೂಢನಂಬಿಕೆಯನ್ನು ವಿರೋಧಿಸಿಸುವ ಮೂಲಕ ಜೀವಿಗಳ ಪರ ನಿಂತವರು ಬಸವಣ್ಣನವರು, ವೇದ ಶಾಸ್ತ್ರ ಜ್ಯೋತಿಷ್ಯ ಪಂಚಾಗಗಳನ್ನು ತೀರಸ್ಕರಿಸುವ ಮೂಲಕ ಎಲ್ಲಾ ವರ್ಗದವರಿಗೂ ಸಮಾನತೆಯನ್ನು ಕೊಟ್ಟವರು ಬಸವಣ್ಣನವರು ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ನರಸಿಂಹರಾಜಪುರ ಬಸವ ಕೇಂದ್ರದ ಬಸವಯೋಗಿಪ್ರಭುಗಳು ಮಾತನಾಡಿ ಬಸವಣ್ಣನವರು ಜಡ ಮತ್ತು ಜಂಜಡ ಸಂಸ್ಕೃತಿಯನ್ನು ಧಿಕ್ಕರಿಸಿ ಜನಪರ ಮತ್ತು ಜೀವಪರ ಸಂಸ್ಕೃತಿಯನ್ನು ತಿಳಿಸಿದರು.
ಎಂದು ತಿಳಿಸಿದರು.

ದೇವರನ್ನು‌ ಒಲಿಸಲು ಹರಕೆ ಮಾಡಿಕೊಳ್ಳುವುದಕ್ಕಿಂತ ಬಸವಣ್ಣನವರ ಸಪ್ತ ಸೂತ್ರಗಳಾದ ಕಳಬೇಡ, ಕೋಲಬೇಡ, ಹುಸಿಯ ನುಡಿಯಲು ಬೇಡ, ತನ್ನ ಬಣ್ಣಿಸ ಬೇಡ, ಇದಿರ ಹಳಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ ಎನ್ನುವ ಮೂಲಕ ದೇವರೊಲುಮೆಯ ದಾರಿಯನ್ನು ತೋರಿದವರು ಬಸವಣ್ಣನವರು ಎಂದು ಹೇಳಿದರು .

ಕಣ್ಗೆ ಶೃಂಗಾರ ಗುರುಹಿರಿಯರ ನೋಡುವುದು ಎನ್ನುವ ಅಕ್ಕಮಹಾದೇವಿಯ ವಚನದಂತೆ ಹಿರಿಯ ನಾಗರಿಕರ ಕ್ಷೇಮ ಯೋಗ ಕೇಂದ್ರದ ಪ್ರಭುರವರನ್ನು ಬಸವಯೋಗಿಪ್ರಭುಗಳು ಶ್ಲಾಘಿಸಿದರು.

ಚೌಹಳ್ಳಿ ನಿಂಗರಾಜಪ್ಪ ಮಲೆಯೂರು ಸೋಮಣ್ಣ ಪ್ರಸನ್ನ ಮತ್ತಿತರರ ಹಿರಿಯ ನಾಗರಿಕರು ಉಪಸ್ಥಿತರಿದ್ದರು.

Advertisement
Tags :
Advertisement