HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಯಶಸ್ವಿಯಾಗಿ ನಡೆದ ಬಸವ ಧರ್ಮ ಜಾಗೃತಿ ಅಭಿಯಾನ

ಮೈಸೂರು ಗ್ರಾಮಾಂತರ ಮಾದಿಹಳ್ಳಿ ಗ್ರಾಮದಲ್ಲಿ ಬಸವ ಭಾರತ ಪ್ರತಿಷ್ಠಾನದ ವತಿಯಿಂದ ಬಸವ ಧರ್ಮಜಾಗೃತಿ ಅಭಿಯಾನ, ಇಷ್ಟಲಿಂಗ ಧಾರಣೆ ನೆರವೇರಿತು.
04:41 PM Aug 06, 2024 IST | ಅಮೃತ ಮೈಸೂರು
Advertisement

ಮೈಸೂರು, ಆ.6: ದೀಪವನ್ನು ಮುಟ್ಟಿದರೆ ದೀಪ ಹೇಗೆ ಬೆಳಗುವುದೋ ಹಾಗೆಯೇ ಲಿಂಗವಂತರನ್ನು ಮುಟ್ಟಿದವರು ಹಾಗೂ ಅವರ ಸಂಗಡಕ್ಕೆ ಬಂದವರೆಲ್ಲಾ ಪಾವನಿಗಳಾಗುತ್ತಾರೆ ಎಂದು ಪೂಜ್ಯ ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿಗಳು ನುಡಿದರು.

Advertisement

ಮೈಸೂರು ಗ್ರಾಮಾಂತರ ಮಾದಿಹಳ್ಳಿ ಗ್ರಾಮದಲ್ಲಿ ಬಸವ ಭಾರತ ಪ್ರತಿಷ್ಠಾನದ ವತಿಯಿಂದ ನಡೆದ ಬಸವ ಧರ್ಮಜಾಗೃತಿ ಅಭಿಯಾನ, ಇಷ್ಟಲಿಂಗ ಧಾರಣೆ, ಶಿವಯೋಗ ಹಾಗೂ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಅಷ್ಟಾವರಣ, ಪಂಚಾಚಾರ ಹಾಗೂ ಷಟ್ ಸ್ಥಲಗಳ ಬಗ್ಗೆ ಅವರು ಅರಿವು ಮೂಡಿಸಿದರು.ಈ ವೇಳೆ ಸುಮಾರು ಎಪ್ಪತ್ತಕ್ಕೂ ಅಧಿಕ ಮಕ್ಕಳಿಗೆ ಇಷ್ಟಲಿಂಗ ದೀಕ್ಷೆ ಕರುಣಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶರಣ ದೇವರಾಜು ಪಿ. ಚಿಕ್ಕಹಳ್ಳಿ ಅವರು ಬೆಳಗ್ಗೆ ಎದ್ದೊಡನೆ ಯಾರನ್ನು ನೋಡಬೇಕು ಎಂಬುದನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಬಸವ ಭಾರತ ಮಾಸಿಕ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಮಹದೇವಪ್ಪ, ಚೌಹಳ್ಳಿ ನಿಂಗರಾಜಪ್ಪ, ವಿಶ್ವ ಬಸವ ಸೇನೆ ಅಧ್ಯಕ್ಷ ಬಸವ ಯೋಗೀಶ್, ನಾಗರತ್ನಮ್ಮ ನಂಜುಂಡಪ್ಪ, ಇನ್ನಿತರರಿದ್ದರು.

ಅಧ್ಯಕ್ಷತೆ ವಹಿಸಿದ್ದ ಬಸವ ಭಾರತ ಪ್ರತಿಷ್ಠಾನ ದ ಅಧ್ಯಕ್ಷ ಶಿವರುದ್ರಪ್ಪ ಅವರು ಎಲ್ಲರನ್ನೂ ಸನ್ಮಾನಿಸಿದರು.

Advertisement
Tags :
Basava DharmaMysore
Advertisement
Next Article