For the best experience, open
https://m.navayuganews.com
on your mobile browser.
Advertisement

ಮೈಸೂರು: ಮುಂದಿನ ಒಂದು ವರ್ಷದವರೆಗೂ ಒಳ್ಳೆಯ ಕೆಲಸ ಮಾಡಲು ಅವಕಾಶ ನೀಡು ಎಂದು ತಾಯಿ ಚಾಮುಂಡಿಗೆ ಸಿಎಂ ಸಿದ್ದರಾಮಯ್ಯ ಮೊರೆ ಇಟ್ಟರು.

Advertisement

ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ,ರಾಜ್ಯದಲ್ಲಿ ದೇವರಾಜ ಅರಸು ಬಿಟ್ಟರೇ 5 ವರ್ಷವೂ ಸಿಎಂ ಆಗಿದ್ದು ಅದು ಸಿದ್ದರಾಮಯ್ಯ‌ ಎಂದು ತಿಳಿಸಿದರು.

ನಾನು ಡಿ.ಕೆ ಶಿವಕುಮಾರ್ ಇಬ್ಬರು ಒಟ್ಟಿಗೆ ಬೆಟ್ಟಕ್ಕೆ ಬಂದು ಚಾಮುಂಡಿ ತಾಯಿಯ ಪೂಜೆ ಮಾಡಿ 5 ಗ್ಯಾರಂಟಿಗೆ ಶಕ್ತಿ ಕೊಡಮ್ಮ ಅಂತ ಕೇಳಿದ್ದವು. ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಜಾರಿ ಮಾಡಿದ್ದೇವೆ ಇದು ಚಾಮುಂಡಿಯ ಆಶೀರ್ವಾದ,ಈಗಲೂ ಎಷ್ಟೇ ತೊಡಕು ಬಂದರೂ ತಾಯಿ ಚಾಮುಂಡೇಶ್ವರಿ ಆಶೀರ್ವಾದ ನನಗೆ ಇದೆ
ಎಂದು ಹೇಳಿದರು.

ಚಾಮುಂಡಿ ಕೃಪೆಯಿಂದ ಇಲ್ಲಿಯವರೆಗೂ ತಪ್ಪು ಮಾಡಿಲ್ಲ,ಜನರ, ದೇವರ ಆಶೀರ್ವಾದ ಇರೋವರೆಗೂ ನನ್ನನ್ನು ಯಾರಿಂದಲೂ ಏನು ಮಾಡಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷಗಳಿಗೆ ಪರೋಕ್ಷವಾಗಿ ಸಿಎಂ ಟಾಂಗ್ ನೀಡಿದರು.

ಏನಪ್ಪಾ ಜಿ.ಟಿ ದೇವೇಗೌಡ ನೀನೇ ನನ್ನ ಒಂದು ಬಾರಿ ಸೋಲಿಸಿದ್ದೆ ಎಂದು ವೇದಿಕೆಲ್ಲಿದ್ದ ಜಿಟಿಡಿಗೆ‌ ಚುಡಾಯಿಸಿದ ಸಿದ್ದು, ಒಟ್ಟು 9 ಚುನಾವಣೆ ಗೆದ್ದಿದ್ದೇನೆ. 40 ವರ್ಷ ಮುಖ್ಯಮಂತ್ರಿ,ಉಪ ಮುಖ್ಯ ಮಂತ್ರಿ,ಮುಖ್ಯ ಮಂತ್ರಿ ಆಗಿದ್ದೇನೆ. ಚಾಮುಂಡಿ ಕೃಪೆಯಿಂದ ಇಲ್ಲಿವರೆಗೂ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ರೆ ಇಷ್ಟು ಧೀರ್ಘ ರಾಜಕಾರಣ ಮಾಡಲು ಆಗುತ್ತಿರಲಿಲ್ಲ ಎಂದು ಹೇಳಿದರು.

Advertisement
Tags :
Advertisement