HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ನೆಲಮಂಗಲ ಬಳಿ ಭೀಕರ ಅಪಘಾತ:6 ಮಂದಿ ದುರ್ಮರಣ

ಕಾರು, ಲಾರಿ, ಸ್ಕೂಲ್ ಬಸ್ ನಡುವೆ ನಡೆದ ಸರಣಿ ಅಪಘಾತ ಸಂಭವಿಸಿ, ಒಂದೇ ಕುಟುಂಬದ 6 ಮಂದಿ ಮೃತಪಟ್ಟ ಘಟನೆ ಬೆಂಗಳೂರಿನ ನೆಲಮಂಗಲ‌ ತಾಲೂಕಿನ‌ ಧಾಬಸ್ ಪೇಟೆ‌ ಸಮೀಪ ನಡೆದಿದೆ.
05:38 PM Dec 21, 2024 IST | ಅಮೃತ ಮೈಸೂರು
Advertisement

ಬೆಂಗಳೂರು: ಕಾರು, ಲಾರಿ, ಸ್ಕೂಲ್ ಬಸ್ ನಡುವೆ ನಡೆದ ಸರಣಿ ಅಪಘಾತ ಸಂಭವಿಸಿ, ಒಂದೇ ಕುಟುಂಬದ 6 ಮಂದಿ ಮೃತಪಟ್ಟ ಘಟನೆ ಬೆಂಗಳೂರಿನ ನೆಲಮಂಗಲ‌ ತಾಲೂಕಿನ‌ ಧಾಬಸ್ ಪೇಟೆ‌ ಸಮೀಪ ನಡೆದಿದೆ.

Advertisement

ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಟಿ.ಬೇಗೂರು ಬಳಿ ಘಟನೆ ನಡೆದಿದ್ದು, ಕಾರಿನ ಮೇಲೆ ಕಂಟೇನರ್‌ ಬಿದ್ದ ಪರಿಣಾಮ ಕಾರಿನಲ್ಲಿದ್ದ ಒಂದೇ ಮನೆಯ‌ 6 ಮಂದಿ ಮೃತಪಟ್ಟಿದ್ದಾರೆ.

ವಿಜಯಪುರದ ಇಂಜಿನಿಯರ್ ಚಂದ್ರಯಾಗಪ್ಪ ಮತ್ತು ಮನೆಯವರು ಮೃತಪಟ್ಟವರೆಂದು ಗೊತ್ತಾಗಿದೆ

ಅಪಘಾತದ ವೇಳೆ ಕಂಟೇನರ್‌ ಕಾರಿನ ಮೇಲೆ ಬಿದ್ದ ಪರಿಣಾಮ, ಕಾರು ಸಂಪೂರ್ಣ ಅಪ್ಪಚ್ಚಿಯಾಗಿದೆ, ಕಾರು ಹೊರತೆಗೆಯಲು ಪೊಲೀಸರು ಹರಸಾಹಸಪಟ್ಟರು.

ಹರಸಾಹಸ ಪಟ್ಟು ಮೂರು ಕ್ರೇನ್‌ಗಳ ಸಹಾಯದಿಂದ ಕಂಟೇನರ್‌ ಮೇಲೆತ್ತಿ ಕಾರನ್ನು ಹೊರತೆಗೆಯಲಾಯಿತು.

ಇದರಿಂದ ತುಮಕೂರು ರಸ್ತೆಯಲ್ಲಿ ಸುಮಾರು 10 ಕಿಮೀ ನಷ್ಟು ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು.

Advertisement
Tags :
BangaluruDabaspetNelamangala
Advertisement
Next Article