For the best experience, open
https://m.navayuganews.com
on your mobile browser.
Advertisement

ಬೆಂಗಳೂರು, ಸೆ. 17 : ನಟ, ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ನಾಳೆ ಅಭಿಮಾನಿಗಳಿಂದ ರಕ್ತದಾನ ಶಿಬಿರ ನಡೆಯಲಿದೆ.

ಉಪೇಂದ್ರ ಅವರ 56ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿ ಬಳಗ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದು, ಬುಧವಾರ ಬೆಳಿಗ್ಗೆ 9 ರಿಂದ ಉಪೇಂದ್ರ ಅವರ ಕತ್ರಿಗುಪ್ಪೆ ನಿವಾಸದ ಮುಂದೆ ಹುಟ್ಟುಹಬ್ಬದ ಆಚರಣೆಗೆ ಸಕಲ ಸಿದ್ದತೆ ಅಭಿಮಾನಿಗಳು ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಶುಭಾಶಯ ಕೋರಲು ಬರುವ ಅಭಿಮಾನಿಗಳಿಗೆ ಲಘು ಉಪಾಹಾರ ಸಹ ಮಾಡಲಾಗಿದ್ದು, ಅಭಿಮಾನಿಗಳ ಜೊತೆ ಉಪೇಂದ್ರ ಅವರು ನಾಳೆ ಜನ್ಮದಿನವನ್ನು ಸಂಭ್ರಮದಿಂದ ಅಚರಣೆ ಮಾಡಿಕೊಳ್ಳಲಿದ್ದಾರೆ.

Advertisement

ಇದೇ ವೇಳೆ ಉಪೇಂದ್ರ ಚಿತ್ರವು 25 ವರ್ಷಗಳ ನಂತರ ಮರುಬಿಡುಗಡೆಯಾಗುತ್ತಿದ್ದು, ನಗರದ ಕೆ.ಜಿ ರಸ್ತೆಯ ಮುಖ್ಯ ಚಿತ್ರಮಂದಿರ ನರ್ತಿಕಿ ಚಿತ್ರಮಂದಿರದಲ್ಲಿ ಬೆಳಿಗ್ಗೆ 6 ಗಂಟೆಗೆ ಮೊದಲ ಪ್ರದರ್ಶನ ಪ್ರಾರಂಭವಾಗಲಿದೆ.

ಇದೇ ವೇಳೆ ಬೆಂಗಳೂರು ಲಯನ್ಸ್ ಕ್ಲಬ್ ಆದರ್ಶ ಮತ್ತು ಬಿಎಸ್'ಕೆ ಜೀವಾಶ್ರಯ ಕೇಂದ್ರ ಹಾಗೂ ಅಭಿಮಾನಿಗಳ ಚಕ್ರವರ್ತಿ ಸೂಪರ್ ಸ್ಟಾರ್ ಡಾ॥ ಉಪೇಂದ್ರ ವೇದಿಕೆ ಸೇರಿದಂತೆ ಹಲವಾರು ಉಪೇಂದ್ರ ಅಭಿಮಾನಿಗಳ ಸಂಘಗಳಿಂದ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಸಹ ಹಮ್ಮಿಕೂಳ್ಳಲಾಗಿದೆ.

Advertisement
Tags :
Advertisement