ಮಹಿಳೆ ಸಾವು ಪ್ರಕರಣ:ಅಲ್ಲು ಅರ್ಜುನ್ ನ್ಯಾಯಾಂಗ ಬಂಧನ
05:20 PM Dec 13, 2024 IST
|
ಅಮೃತ ಮೈಸೂರು
Advertisement
ಹೈದರಾಬಾದ್: ಸಂಧ್ಯಾ ಥಿಯೇಟರ್ ಮಹಿಳೆ ದುರಂತ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲಿವುಡ್ ಖ್ಯಾತ ನಟ ಅಲ್ಲು ಅರ್ಜುನ್ ಅವರಿಗೆ 14 ದಿನ ನ್ಯಾಯಾಂಗ ಬಂಧನ ನೀಡಲಾಗಿದೆ.
ಕಳೆದ ವಾರ ‘ಪುಷ್ಪ 2’ ಸಿನಿಮಾ ಬಿಡುಗಡೆ ವೇಳೆ ಅಲ್ಲು ಅರ್ಜುನ್ ರಷ್ಮಿಕಾ ಮಂದಣ್ಣ ಮತ್ತಿತರರು ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು.
Advertisement
ಆಗ ಅಲ್ಲು ಅರ್ಜುನ್ ಥಿಯೇಟರ್ ಗೆ ಬಂಧಿರುವ ವಿಷಯ ತಿಳಿದು ಅಭಿಮಾನಿಗಳು ಅವರನ್ನು ನೋಡಲು ಒಮ್ಮೆಗೆ ಸಿನೆಮಾ ಮಂದಿರದ ಒಳಗೆ ನುಗ್ಗಿದ್ದರಿಂದ ಕಾಲ್ತುಳಿತ ಉಂಟಾಗಿತ್ತು.ಆ ಸಂದರ್ಭದಲ್ಲಿ ಒಬ್ಬ ಮಹಿಳೆ ಉಸಿರುಗಟ್ಟಿ ನಿಧನ ಹೊಂದಿದ್ದರು.
ಈ ಹಿನ್ನೆಲೆಯಲ್ಲಿ ಚೀಕಟಪಲ್ಲಿ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದು,ಅವರಿಗೆ ಹದಿನಾಲ್ಕು ದಿನ ನ್ಯಾಯಾಂಗ ಬಂಧನ ನೀಡಲಾಗಿದೆ.
Advertisement
Next Article