For the best experience, open
https://m.navayuganews.com
on your mobile browser.
Advertisement

ಮೈಸೂರು: ಕ್ಷೇತ್ರದ ಜನತೆ ನನ್ನನ್ನು ವಿಧಾನಸಭೆಗೆ ಗೆಲ್ಲಿಸಿ ಕಳಿಸುವ ಮೂಲಕ ನನಗೆ ಹೆಚ್ಚಿನ ಜವಬ್ದಾರಿ ಕೊಟ್ಟಿದ್ದಾರೆ ಅವರ ಸೇವೆ ಮಾಡುವುದು ನನ್ನ ಧರ್ಮ ಎಂದು ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು.

Advertisement

ಕೆ.ಅರ್.ಕ್ಷೇತ್ರದ ಶಾಸಕ ಟಿ.ಎಸ್‌. ಶ್ರೀ ವತ್ಸ ಅವರ ಸಾರ್ವಜನಿಕ ಸಂಪರ್ಕ ಕಚೇರಿಯನ್ನು ಅಗ್ರಹಾರದ ಬಳಿ ಇರುವ ವಲಯ ಕಚೇರಿಯಲ್ಲಿ ಪ್ರಾರಂಭಿಸಲಾಗಿದ್ದು ಈ ಸಂದರ್ಭದಲ್ಲಿ ಅವರು ಮಾತನಾಡಿದರು.

ನನ್ನ ಕಚೇರಿಯು ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ ಯಾವುದೆ ಕೆಲಸವಿದ್ದರು ಈ ಕಚೇರಿಗೆ ಬರಬೇಕೆಂದು ಮನವಿ ಮಾಡಿದರು.

ಕಚೇರಿ ಉದ್ಘಾಟನೆ ಸಂಧರ್ಭದಲ್ಲಿ ಬಂದು ಶುಭ ಹಾರೈಸಿದ ಮಠಾಧಿಶರುಗಳಿಗೆ, ಸಾರ್ವಜನಿಕರಿಗೆ, ನನ್ನ ಮತದಾರರಿಗೆ, ಅಧಿಕಾರಿಗಳಿಗೆ,ಕಾರ್ಯಕರ್ತರಿಗೆ, ನನ್ನ ಹಿತೈಶಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಈ ವೇಳೆ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಗಳಾದ ಗಿರೀಧರ,ಕೇಬಲ್ ಮಹೇಶ್, ನಗರ ಉಪಾಧ್ಯಕ್ಷ ಜೋಗಿಮಂಜು,ರಾಜ್ಯ ಕಾರ್ಯಕಾರಿಣಿ ಸದಸ್ಯ ಶೀನಿವಾಸ್,ನಗರ ಯುವಮೊರ್ಚಾ ಅಧ್ಯಕ್ಷ ರಾಕೇಶ್ ಗೌಡ,ಕೆ.ಅರ್ ಯುವ ಮೊರ್ಚಾ ಅಧ್ಯಕ್ಷ ನಿಶಾಂತ್,ರವಿ,
ಲಖನ್,ಸತ್ಯಾನಂದ ವಿಟ್ಟು,ರಂಜನ್,ಶರತ್ ಭಂಡಾರಿ ಮತ್ತಿತರರು ಹಾಜರಿದ್ದರು.

Advertisement
Tags :
Advertisement