ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿದ ಗೋಮಾತಾ
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ಸೀಮೆ ಹಸು ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿದೆ.
07:50 PM Nov 28, 2024 IST
|
ಅಮೃತ ಮೈಸೂರು
Advertisement
ಮಂಡ್ಯ: ಸಾಮಾನ್ಯವಾಗಿ ಹಸುಗಳು ಒಂದು ಕರುವಿಗೆ ಜನ್ಮ ನೀಡುತ್ತವೆ.ಎಲ್ಲೋ ಅಪರೂಕ್ಕೊಮ್ಮೆ ಎರಡು ಕರುಗಳಿಗೆ ಜನನ ನೀಡುತ್ತವೆ ಆದರೆ ಮಹಾತಾಯಿ ಗೋಮಾತಾ ಮೂರು ಕರುಗಳಿಗೆ ಜನ್ಮ ನೀಡಿದೆ.
Advertisement
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ಸೀಮೆ ಹಸು ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿದೆ.
ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದ ಮಾಲೀಕ ಕಂಠಿ ಶಿವಣ್ಣ (ಚಂದ್ರು) ಅವರು ಸಾಕಿದ ಸೀಮೆ ಹಸು.ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿದೆ.ಮೂರು ಹೆಣ್ಣು ಕರುಗಳು ಮತ್ತು ಹಸು ಆರೋಗ್ಯವಾಗಿವೆ.
ಈ ಅಪರೂಪದ ಸುದ್ದಿ ಎಲ್ಲೆಡೆ ಹರಡಿ ಹಸು ಕರುಗಳನ್ನು ನೋಡಲು ಗ್ರಾಮಸ್ಥರು ಮಾತ್ರವಲ್ಲದೆ ಅಕ್ಕಪಕ್ಕದ ಊರಿನ ಜನರು ಬರುತ್ತಿದ್ದಾರೆ.
Advertisement
Next Article