HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ಮುಡಾ ಹಗರಣ:ಪಾಲಿಕೆ ನೌಕರ ವಜಾ

06:54 PM Nov 15, 2024 IST | ಅಮೃತ ಮೈಸೂರು
Advertisement

ಮೈಸೂರು: ಮುಡಾ ಹಗರಣದಲ್ಲಿ ಭಾಗಿಯಾದ ಮಹಾನಗರ ಪಾಲಿಕೆ ನೌಕರನನ್ನು ಆಯುಕ್ತರು ವಜಾ ಮಾಡಿದ್ದಾರೆ.

Advertisement

ಮುಡಾ ಹಗರಣದ ತನಿಖೆ ನಡೆಸುತ್ತಿರುವ ಇಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ಮೈಸೂರು ಮಹಾನಗರ ಪಾಲಿಕೆಯ ನೌಕರ ಬಿ.ಕೆ.ಕುಮಾರ್‌ ವಜಾಗೊಂಡಿದ್ದಾನೆ.

ಇಡಿ ಅಧಿಕಾರಿಗಳು ಮುಡಾ ಹಗರಣದ ಕಿಂಗ್‌ಪಿನ್ ದ್ವಿತೀಯ ದರ್ಜೆ ಸಹಾಯಕ ಬಿ.ಕೆ.ಕುಮಾರ್‌ನನ್ನು ವಿಚಾರಣೆಗೆ ಒಳಪಡಿಸಿದ್ದರು.

ಇಡಿ ವಿಚಾರಣೆ ಬೆನ್ನಲ್ಲೇ ಕುಮಾರ್‌ನನ್ನು ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಸೇವೆಯಿಂದ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.

ಕುಮಾರ್ ಪಾಲಿಕೆ ನೌಕರನಾಗಿ ಕೆಲಸ ಆರಂಭಿಸಿದ್ದ, ಹೆಚ್ಚುವರಿ ಕೆಲಸಕ್ಕಾಗಿ ಮುಡಾಗೆ ನೇಮಕವಾಗಿದ್ದ. ಆದರೆ, ಈತ ಮುಡಾದಲ್ಲಿ ಕೆಲಸ ಮಾಡುತ್ತಲೆ ಮಹಾನಗರ ಪಾಲಿಕೆಯಿಂದಲೂ ವೇತನ ಪಡೆಯುತ್ತಿದ್ದ.

ನಾಲ್ಕು ದಿನಗಳ ಹಿಂದೆ ಬಿ.ಕೆ.ಕುಮಾರ್‌ಗೆ ಜಾರಿ ನಿರ್ದೇಶನಾಲಯ ಡ್ರಿಲ್ ಮಾಡಿತ್ತು. ಮುಡಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹಲವು ಅಕ್ರಮಗಳಲ್ಲಿ ಭಾಗಿಯಾದ ಆರೋಪ ಈತನ ಮೇಲಿದೆ.

ಹಿಂದಿನ ಕಮಿಷನರ್‌ಗಳಿಗೆ ಖಾಲಿ ನಿವೇಶನಗಳ ಬಗ್ಗೆ ಮಾಹಿತಿ ಹಾಗೂ ಮಂಜೂರಾತಿ ಮಾಡಲು ಅಗತ್ಯವಿದ್ದ ದಾಖಲೆಗಳನ್ನು ತಂದು ಕೊಡುತ್ತಿದ್ದ ಎಂದು ತಿಳಿದುಬಂದಿದೆ.

Advertisement
Tags :
CorporationMUDAMysoreWorker
Advertisement
Next Article