For the best experience, open
https://m.navayuganews.com
on your mobile browser.
Advertisement

ಮೈಸೂರು: ಕನ್ನಡ ಭಾಷೆಯನ್ನು ಸ್ವಯಂ ಪ್ರೇರಣೆಯಿಂದ ಪ್ರತಿಯೊಬ್ಬರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕಡ್ಡಾಯವಾಗಿ ಬಳಸಿದರೆ ನಮ್ಮ ‌ಭಾಷೆ ಉಳಿಯಲಿದೆ ಎಂದು ಕನ್ನಡದ ಲೇಖಕಿ ಡಾ.ಲತಾ ರಾಜಶೇಕರ್ ಹೇಳಿದರು.

Advertisement

ಲಯನ್ಸ್ ಅಂಬಾಸಿಡರ್ಸ್ ಸಂಸ್ಥೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮಗಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಂಸ್ಥೆಯ ಸದಸ್ಯರು ಹಾಗೂ ಕರವೇ ಸಂಘಟನೆಯಲ್ಲಿ ತೊಡಿಗಿಸಿಕೊಂಡು ಸೇವಾ ಚಟುವಟಿಕೆಗಳನ್ನು ಮಾಡುತ್ತಿರುವ ಲಯನ್ ಲೋಕೇಶ್ ಕುಮಾರ್ ಮತ್ತು ಲಯನ್ ಪ್ರವೀಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ದಂತ ವೈದ್ಯರಾದ ಡಾ. ಲಯನ್ ಡಾ. ಜಿ. ಕಿಶೋರ್ ಅವರು ದಂತ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಲಯನ್ ವರದ್, ಲಯನ್ ಅಂಬಾಡಿ ಮಾಧವ್ ಮತ್ತು ಎ ವಿ ಆರ್ ಚಂದ್ರಕುಮಾರ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಲಯನ್ ವಿ.ಶ್ರೀಧರ್ ,ಕಾರ್ಯದರ್ಶಿ ಲಯನ್ ಬಿ ಮಲ್ಲಿಕಾರ್ಜುನಪ್ಪ, ಖಜಾಂಚಿ ಲಯನ್ ಎಚ್ .ಆರ್ ರವಿಚಂದ್ರ ,ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಲಯನ್ ಟಿ ಎಚ್ ವೆಂಕಟೇಶ್ ,ಜಿಲ್ಲಾ ಅಧ್ಯಕ್ಷ ಲಯನ್ ಸಿ ಆರ್ ದಿನೇಶ್, ವಲಯ ಅಧ್ಯಕ್ಷ ಎಚ್. ಸಿ ಕಾಂತರಾಜು, ಎಚ್ ಕೆ ಪ್ರಸನ್ನ , ಕೆ.ಟಿ.ವಿಷ್ಣು, ಅರುಣ್ ಸಾಗರ್,ಲಯನ್ ವರದಾ,ಲಯನ್ ರವಿ, ಲಯನ್ ಮಹದೇವ್ ಪ್ರಸಾದ್, ಯಶೋದಮ್ಮ, ದೀಪಾ ,ಅಶ್ವಿನಿ,ರಮ್ಯ ಮತ್ತಿತರರು ಹಾಜರಿದ್ದರು.

Advertisement
Tags :
Advertisement