HeadlinesStateBengaluruNationalInternationalPoliticsSportsJob NewsEntertainmentHealth And LifestyleAgriculture And Nature
Advertisement

ದಂತ ಆರೋಗ್ಯ ಪ್ರತಿಯೊಬ್ಬರಿಗೂ ಮಹತ್ವದ್ದು- ಡಾ.ಕಿಶೋರ್

ಲಯನ್ಸ್ ಅಂಬಾಸಿಡರ್ಸ್ ಸಂಸ್ಥೆಯ ಮಾಸಿಕ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು ಹಲ್ಲುಗಳ ಆರೋಗ್ಯದ ಬಗ್ಗೆ ಡಾ. ಕಿಶೋರ್ ಮಾತನಾಡಿದರು.
07:58 PM Dec 01, 2024 IST | ಅಮೃತ ಮೈಸೂರು
Advertisement

ಮೈಸೂರು: ದಂತ ಆರೋಗ್ಯ ಪ್ರತಿಯೊಬ್ಬರಿಗೂ ಮಹತ್ವವಾದದು ಯಾವುದೇ ಕಾರಣಕ್ಕೂ ಇದರ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ಡಾ. ಕಿಶೋರ್ ಅವರು ತಿಳಿಹೇಳಿದರು.

Advertisement

ಲಯನ್ಸ್ ಅಂಬಾಸಿಡರಸ್ ಸಂಸ್ಥೆಯ ಮಾಸಿಕ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು ಹಲ್ಲುಗಳ ಆರೋಗ್ಯದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.

ಒಂದು ವೇಳೆ ದಂತ ಆರೋಗ್ಯವನ್ನು ನಿರ್ಲಕ್ಷ ಮಾಡಿದರೆ ಮನುಷ್ಯನ ದೇಹದ ಇತರ ಅಂಗಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಆ ಕಾರಣಕ್ಕಾಗಿ ಪ್ರತಿಯೊಬ್ಬರೂ ತಮ್ಮ ಹಲ್ಲುಗಳ ಶುಚಿತ್ವದ ಬಗ್ಗೆ ಹಾಗೂ ಬಾಯಿ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಕೊಡಬೇಕು ಎಂದು ಡಾಕ್ಟರ್ ಕಿಶೋರ್ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಲಯನ್ ವಿ.ಶ್ರೀಧರ್, ಕಾರ್ಯದರ್ಶಿ ಲಯನ್ ಬಿ ಮಲ್ಲಿಕಾರ್ಜುನಪ್ಪ, ಖಜಾಂಚಿ ಲಯನ್ಎಚ್ ಆರ್ ರವಿಚಂದ್ರ ,ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಲಯನ್ ಟಿ ಎಚ್ ವೆಂಕಟೇಶ್ ,ಜಿಲ್ಲಾ ಅಧ್ಯಕ್ಷ ಲಯನ್ ಸಿ ಆರ್ ದಿನೇಶ್ , ವಲಯ ಅಧ್ಯಕ್ಷ ಎಚ್. ಸಿ ಕಾಂತರಾಜು,ಸದಸ್ಯರಾದ ಎಚ್ ಕೆ ಪ್ರಸನ್ನ ,ಅರುಣ್ ಸಾಗರ್ ಮತ್ತಿತರರು ಹಾಜರಿದ್ದರು.

Advertisement
Tags :
Lions AmbassadorsMysore
Advertisement
Next Article