For the best experience, open
https://m.navayuganews.com
on your mobile browser.
Advertisement

ಬೆಂಗಳೂರು: ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ, ಜನರು ಬಿಜೆಪಿಯ ಸುಳ್ಳಿನ ವಿರುದ್ಧ ಸತ್ಯ ಗೆಲ್ಲಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Advertisement

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಸಿದ್ದರಾಮಯ್ಯ ಮಾತನಾಡಿದರು.

ಈ ಉಪ ಚುನಾವಣೆ ಫಲಿತಾಂಶ ನನ್ನ ಪಾಲಿಗೆ ಮಹತ್ವದ್ದಾಗಿತ್ತು. ದ್ವೇಷ ಸಾಧನೆಗಾಗಿ ಸುಳ್ಳು ಪ್ರಕರಣ, ಅಪಪ್ರಚಾರದಿಂದ ನನ್ನ ಹಾಗೂ ನನ್ನ ಕುಟುಂಬವನ್ನು ಕಟ್ಟಿಹಾಕಲು ಪ್ರತಿಪಕ್ಷದವರು ಯತ್ನಿಸಿದರು ಎಂದು ದೂರಿದರು.

ರಾಜಭವನದಿಂದ ಕೇಂದ್ರ ತನಿಖಾ ಸಂಸ್ಥೆಗಳವರೆಗೆ ಎಲ್ಲವನ್ನೂ ದುರ್ಬಳಕೆ ಮಾಡಿಕೊಂಡ ಬಿಜೆಪಿ, ಜೆಡಿಎಸ್‌ನವರಿಗೆ ಮತದಾರರು ಫಲಿತಾಂಶದ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದು ಸಿಎಂ ತಿಳಿಸಿದರು.

ನಾನು 2ನೇ ಬಾರಿಗೆ ಸಿಎಂ ಆದ ಬಳಿಕ ಬಿಜೆಪಿ, ಜೆಡಿಎಸ್‌ನವರು ನನ್ನನ್ನು ಮತ್ತು ನನ್ನ ಪತ್ನಿಯನ್ನು ಸುಳ್ಳುಗಳಿಂದ ಹಣಿಯಲು ಯತ್ನಿಸಿದರು ಎಂದು ಹೇಳಿದರು.

40 ವರ್ಷಗಳ ನನ್ನ ರಾಜಕೀಯ ಜೀವನ ನೋಡಿರುವ ಜನರು ಬಿಜೆಪಿಯ ಸುಳ್ಳುಗಳ ವಿರುದ್ಧ ಸತ್ಯವನ್ನು ಗೆಲ್ಲಿಸಿದ್ದಾರೆ.ಎಲ್ಲ ನ್ಯಾಯಾಲಯಗಳಿಗಿಂತ ಶ್ರೇಷ್ಠ ನ್ಯಾಯಾಲಯ ಜನತಾ ನ್ಯಾಯಾಲಯ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಜನತಾ ನ್ಯಾಯಾಲಯದಲ್ಲಿ ನಮ್ಮ ಪರ ತೀರ್ಪು ಬಂದಿದೆ ಎಂದು ಸಿಎಂ ತಿಳಿಸಿದರು.

Advertisement
Tags :
Advertisement