For the best experience, open
https://m.navayuganews.com
on your mobile browser.
Advertisement

ನಂಜನಗೂಡು: ಕನಕದಾಸರ ಚಿಂತನೆಗಳು ಈಗಿನ ಸನ್ನಿವೇಶಕ್ಕೆ ಅತಿ ಅಗತ್ಯವಾಗಿದೆ ಎಂದು ಭೌತಶಾಸ್ತ್ರ ಉಪನ್ಯಾಸಕ ಹೆಚ್.ಎಸ್. ರಾಮನುಜ ಅವರು ತಿಳಿಸಿದರು.

Advertisement

ಕನಕದಾಸರ ಆಧ್ಯಾತ್ಮಿಕ ಚಿಂತನೆಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಒಂದು ಸುಂದರ ಸಮಾಜ ನಿರ್ಮಾಣ ಮಾಡಬಹುದು ಎಂದು ಹೇಳಿದರು.

ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನಕದಾಸ ಜಯಂತಿ ಪ್ರಯುಕ್ತ ವಿಶೇಷ ಉಪನ್ಯಾಸ ನೀಡಿದ ಅವರು ವಿದ್ಯಾರ್ಥಿಗಳಿಗೆ ಕನಕರ ಬಗ್ಗೆ ಮಾಹಿತಿ ನೀಡಿದರು.

ಕನ್ನಡ ಉಪನ್ಯಾಸಕಿ ಡಾ.ಕೆ. ಮಾಲತಿ ಅವರು ಕನಕದಾಸರ ಜೀವನ ಚಿತ್ರಣ ಮತ್ತು ಸಾಹಿತ್ಯದ ಬಗ್ಗೆ ತಿಳಿಸಿಕೊಟ್ಟರು.

ಆಂಗ್ಲ ಭಾಷೆಯ ಉಪನ್ಯಾಸಕ ರಂಗಸ್ವಾಮಿಯವರು ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆಯ ಭಾವನೆಗಳನ್ನು ತರಬೇಕಾದರೆ ಕನಕದಾಸರ ಚಿಂತನೆಗಳ ಬಗ್ಗೆ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.

ಜೀವಶಾಸ್ತ್ರ ಉಪನ್ಯಾಸಕಿ ಎಮ್.ಬಿ. ಪದ್ಮಾವತಿ ಅವರು ಕನಕದಾಸರು ಬರೆದ ಸಾಹಿತ್ಯದ ಹಾಡುಗಳನ್ನು ಹಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್‌ ದಿನೇಶ್ ಅವರು ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯ ಭಾರತದಲ್ಲಿ ತಣ್ಣನೆಯ ಸಾಮಾಜಿಕ ಕ್ರಾಂತಿಯನ್ನು ಉಂಟು ಮಾಡಿದೆ. ಜಾಗತಿಕ ವ್ಯವಸ್ಥೆಯಲ್ಲಿ ತನ್ನದೇ ಆದ ಹಿರಿಮೆಯನ್ನು ದಾಸ ಸಾಹಿತ್ಯ ಪಡೆದಿದೆ ಎಂದು ಹೇಳಿದರು.

ದಿನೇಶ್, ಎನ್. ನಾಗರಾಜು, ಉಪನ್ಯಾಸಕರಾದ ಅಶ್ವತ ನಾರಾಯಣ ಗೌಡ, ಲಿಂಗಣ್ಣ ಸ್ವಾಮಿ,ಡಾ.ಟಿ.ಕೆ.ರವಿ, ಸುಮಿತ್ರ ,ಸ್ವಾಮಿಗೌಡ ,ಮೀನಾ ಹೆಚ್. ಕೆ ಪ್ರಕಾಶ್ ,ಆದಿಲ್ ಹುಸೇನ್, ರೂಪ ,ಸುಮ ,ವತ್ಸಲಾ,ನಾಗರಾಜ ರೆಡ್ಡಿ, ಸುಲಕ್ಷಣ, ಕೆ.ಎಸ್ ಹರೀಶ್ ,ಶೃತಿ ,ಹರೀಶ್ ಎನ್.ಎಂ ,ನಿಂಗಣ್ಣ, ದಿವ್ಯ ಉಪಸ್ಥಿತರಿದ್ದರು.

Advertisement
Tags :
Advertisement